ಅಲೋವೆರಾವು ಹಲವಾರು ಆರೋಗ್ಯ ಲಾಭಗಳನ್ನು ಹೊಂದಿದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಇಂದಿನ ದಿನಗಳಲ್ಲಿ ಸೌಂದರ್ಯವರ್ಧಕವಾಗಿ ಅಲೋವೆರಾವನ್ನು ಬಳಸದೆ ಇರುವವರು ತುಂಬಾ ಕಡಿಮೆ.
ಯಾಕೆಂದರೆ ಅಲೋವೆರಾದಲ್ಲಿ ಇರುವಂತಹ ಸೌಂದರ್ಯವರ್ಧಕ ಗುಣಗಳು ಬೇರೆ ಯಾವುದೇ ರೀತಿಯ ಸಾಮಗ್ರಿಗಳಲ್ಲೂ ನಿಮಗೆ ಸಿಗಲಾರದು. ಹೀಗಾಗಿ ಅಲೋವೆರಾವು ತುಂಬಾ ಪರಿಣಮಕಾರಿ ಆಗಿ ಸೌಂದರ್ಯವರ್ಧಕ ಉತ್ಪನ್ನಗಳಲ್ಲೂ ಬಳಕೆ ಮಾಡಲಾಗುತ್ತಾ ಇದೆ. ನೇರವಾಗಿ ಅಲೋವೆರಾ ಲೋಳೆಯನ್ನು ಮೈಗೆ ಹಚ್ಚಿಕೊಂಡರೂ ಅದರ ಲಾಭಗಳು ಸಿಗುವುದು. ಇದು ಕೆಲವೊಂದು ಚರ್ಮದ ಸಮಸ್ಯೆಗಳನ್ನು ನಿವಾರಿಸುವ ಜತೆಗೆ ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು.
ಸನ್ ಬರ್ನ್ಸ್ ಮೇಲೆ ಅಲೋವೆರಾ ಅಪ್ಲಿಕೇಶನ್ ವೇಗವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ ತಾಜಾ ಅಲೋವೆರಾ ಲೋಳೆಯನ್ನು ಕುಡಿದರೆ ಅದರಿಂದ ಜೀರ್ಣಕ್ರಿಯೆ ಸುಧಾರಣೆ ಆಗುವುದು ಮತ್ತು ಅಸಿಡಿಟಿಯಿಂದ ಬಳಲುವ ಸಮಸ್ಯೆಗೆ ಇದು ಪರಿಹಾರ ನೀಡುವುದು. ನೀವು ಅಲೋವೆರಾ ಲೋಳೆಯನ್ನು ಬೇರೆ ಜ್ಯೂಸ್ ಜತಗೆ ಸೇರಿಸಿಕೊಂಡು ಕುಡಿಯಬಹುದು. ಇದು ದೇಹವನ್ನು ಒಳಗಿನಿಂದಲೇ ಶುದ್ಧೀಕರಿಸುವುದು. ಹೀಗಾಗಿ ಇದರ ಪರಿಣಾಮವು ಚರ್ಮದಲ್ಲಿ ಕಾಣಸಿಗುವುದು.
ಚರ್ಮವು ಸ್ವಚ್ಛವಾಗಿ ಕಾಂತಿಯುತವಾಗಿರುವುದು. ಅಲೋವೆರಾ ಎಲೆಯನ್ನು ಕತ್ತರಿಸಿ ಜೆಲ್ ಅನ್ನು ಹೊರತೆಗೆಯುವ ಮೂಲಕ ಪ್ರಾರಂಭಿಸಿ. ಮುಖದ ಬಳಕೆಗಾಗಿ, ಶುದ್ಧೀಕರಿಸಿದ ಚರ್ಮಕ್ಕೆ ಸಣ್ಣ ಪ್ರಮಾಣದ ಜೆಲ್ ಅನ್ನು ಅನ್ವಯಿಸಿ, ವೃತ್ತಾಕಾರದ ಚಲನೆಯಲ್ಲಿ ನಿಧಾನವಾಗಿ ಮಸಾಜ್ ಮಾಡಿ ಮುಖದಲ್ಲಿರುವ ಮೊಡವೆಗಳಿಗೆ ಉತ್ತಮ ಔಷಧಿಯಾಗಿದೆ . ಒಣ ಚರ್ಮಕ್ಕಾಗಿ ಸಾಮಾನ್ಯ ಮಾಯಿಶ್ಚರೈಸರ್ ಆಗಿ ಕ್ರೀಮ್ ಮತ್ತು ಲೋಷನ್‌ಗಳನ್ನು ಬದಲಾಯಿಸಿ. ಅಲೋ ವೇಗವಾಗಿ ಹೀರಿಕೊಳ್ಳುತ್ತದೆ!