ಕರಾಚಿ: ಅವಿವಾಹಿತ ಮಹಿಳೆಗೆ ಸಮಾಜದಲ್ಲಿ ಗೌರವ ಇರೋದಿಲ್ಲ. ಹಾಗೂ ಆಕೆಗೆ ಗೌರವ ಕೊಡಕೂಡದು. ಮದುವೆ ಆಗದ ಮಹಿಳೆ ಸಮಾಜದಲ್ಲಿ ಸಾರ್ವಜನಿಕ ಆಸ್ತಿ ಆಗುತ್ತಾಳೆ. ಇದರಿಂದ ತಪ್ಪಿಸಿಕೊಳ್ಳಲು ಅವಿವಾಹಿತ ಪುರುಷ ಸಿಗದೇ ಇದ್ದಲ್ಲಿಆಕೆ ವಿವಾಹಿತ ಪುರುಷನನ್ನೇ ಮದುವೆ ಆಗಬಹುದು ಎಂದು ಇಸ್ಲಾಮ್ ಚಿಂತಕ ಝಾಕೀರ್ ನಾಯ್ಕ್ ಸಲಹೆ ನೀಡಿದ್ದಾರೆ. ಸಮಾಜದಲ್ಲಿ ಮಹಿಳೆಗೆ ಗೌರವ ಸಿಗಬೇಕಾದರೆ ಆಕೆ ಮೊದಲು ಮದುವೆ ಆಗಬೇಕು. ಇಲ್ಲದಿದ್ದರೆ ಆಕೆ ಸಮಾಜದಲ್ಲಿ ಬಜಾರಿ ಹೆಂಗಸಾಗುತ್ತಾಳೆ. ವಿವಾಹವು ಆಕೆಯ ಸಾಮಾಜಿಕ ಸ್ಥಾನಮಾನವನ್ನು ಗುರುತಿಸುತ್ತದೆ ಎಂದು ಝಾಕೀರ್ ನಾಯ್ಕ್ ಹೇಳಿದ್ದಾನೆ. ಇಂತಹ ಅನೇಕ ಮೂಲಭೂತವಾದಿ ಹೇಳಿಕೆಗಳಿಂದ ಸುದ್ದಿ ಆಗಿರುವ ಝಾಕೀರ್ ನಾಯ್ಕ್ ವಿರುದ್ಧ ಮುಸ್ಲಿಮ್ ಪ್ರಗತಿಪರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
