ಬೆಂಗಳೂರು: ರಾಜ್ಯ ಹೈಕೋರ್ಟ್ ಗೆ ಅ.16ರಿಂದ 21ರವರೆಗೆ ದಸರಾ ರಜೆ ಘೋಷಣೆಯಾಗಿದ್ದು, ಈ ಹಿನ್ನಲೆಯಲ್ಲಿ ತುರ್ತು ಅರ್ಜಿಗಳ ವಿಚಾರಣೆಗಾಗಿ ರಜಾ ಕಾಲದ ಪೀಠಗಳನ್ನು ರಚನೆ ಮಾಡಿದೆ.
ಇದರ ನಡುವೆ ರಜಾಕಾಲೀನ ಪೀಠಗಳು ಬೆಂಗಳೂರು, ಧಾರವಾಡ & ಕಲಬುರಗಿಯಲ್ಲಿ ಕರ್ತವ್ಯ ನಿರ್ವಹಿಸಲಿವೆ ಎಂದು ಹೈಕೋರ್ಟ್ ನ್ಯಾಯಿಕ ರಿಜಿಸ್ಟ್ರಾರ್ ಎಂ.ಚಂದ್ರಶೇಖರ ರೆಡ್ಡಿ ತಿಳಿಸಿದ್ದಾರೆ. ಬೆಂಗಳೂರು ಹೈಕೋರ್ಟ್ ಪೀಠದಲ್ಲಿ ನ್ಯಾ. B.M ಶ್ಯಾಮ್ ಪ್ರಸಾದ್ & ನ್ಯಾ.T. ವೆಂಕಟೇಶ್ ನಾಯ್ಕ ಪೀಠ ವಿಚಾರಣೆ ನಡೆಸಲಿದೆ ಎಂದು ಹೇಳಿದ್ದಾರೆ.