ಹೊಸಪೇಟೆ: ವಿದ್ಯುತ್ ನಿರ್ವಾಹಣೆ ಕೆಲಸ ನಿಮಿತ್ತ ಅ.29ರಂದು ಹೊಸಪೇಟೆ ನಗರಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ಹೊಸಪೇಟೆ ನಗರ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
11ಕೆವಿ ಎಫ್10-ವಿಜಯನಗರ ಎಕ್ಸಪ್ರೆಸ್ ಫೀಡರಿನ ಮಾರ್ಗಕ್ಕೆ ನಿರ್ವಾಹಣೆ ಕೆಲಸ (ಮೆಂಟೆನೆನ್ಸ್ ವರ್ಕ್)ವನ್ನು ಹಮ್ಮಿಕೊಂಡಿರುವ ಪ್ರಯುಕ್ತ ಹೊಸಪೇಟೆ ನಗರದ ಕುಡಿಯುವ ನೀರಿನ ಘಟಕಕ್ಕೆ ಅ.29ರಂದು ಬೆಳಿಗ್ಗೆ 10 ರಿಂದ ಸಾಯಂಕಾಲ 05 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಇದರಿಂದ ನಗರದ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.