ದೇಶದ ಕೋಟ್ಯಂತರ ಆಂಡ್ರಾಯ್ಡ್ ಮೊಬೈಲ್ ಫೋನ್ ಗಳಿಗೆ ಹ್ಯಾಕಿಂಗ್ ಆತಂಕ ಎದುರಾಗಿದೆ. ಮೊಬೈಲ್ ಬಳಕೆದಾರರಿಗೆ ಗೊತ್ತಾಗದಂತೆ, ಮೊಬೈಲ್ ಗಳಿಗೆ ಸೂಕ್ಷ್ಮ ಮಾಹಿತಿ ಕದಿಯುವ ದುರುದ್ದೇಶದ ಕೋಡ್ ಕಳಿಸುವ ಸಾಧ್ಯತೆ ಬಗ್ಗೆ ಕೇಂದ್ರ
ಸರ್ಕಾರದ ಭಾರತೀಯ ಕಂಪ್ಯೂ ಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ ಎಚ್ಚರಿಕೆ ನೀಡಿದೆ.
ಈ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಯಾಮ್ಸಂಗ್, ರಿಯಲ್ ಮಿ, ಒನ್ ಪ್ಲಸ್ ಸೇರಿದಂತೆ ಮೊಬೈಲ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಆ ಕಂಪನಿಗಳು ಹ್ಯಾಕಿಂಗ್ ತಡೆಯಲು ಸೆಕ್ಯೂರಿಟಿ ಪ್ಯಾಚ್ ಗಳನ್ನು ಬಿಡುಗಡೆ ಮಾಡಲು ಆರಂಭಿಸಿವೆ,