ಆದಿತ್ಯ ಎಲ್-1 ಉಡಾವಣೆಗೆ ಕ್ಷಣಗಣನೆ ಆರಂಭ

ಅಮರಾವತಿ: ಭಾರತದ ಚಂದ್ರಯಾನ-3 ರ ಯಶಸ್ಸಿನ ನಂತರ, ದೇಶವು ಮತ್ತೊಂದು ಮಹತ್ತರ ಸಾಧನೆಗೆ ಸಜ್ಜಾಗುತ್ತಿದ್ದು, ಈ ಬಾರಿ ಇಸ್ರೋ ಸೂರ್ಯನಿತ್ತ ದೃಷ್ಟಿ ಇಟ್ಟಿದೆ. ಇಸ್ರೋದ ಸೂರ್ಯ ಮಿಷನ್ ಆಗಿರುವ ಆದಿತ್ಯ ಎಲ್-1 ಗೆ ಕ್ಷಣಗಣನೆ ಆರಂಭವಾಗಿದ್ದು, ಈ ಮಿಷನ್ ಇಂದು ಬೆಳಗ್ಗೆ 11:50ಕ್ಕೆ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಲಾಂಚ್ ಆಗಲಿದೆ.

ಈ ಪ್ರಯೋಗದ ಹಿನ್ನೆಲೆಯಲ್ಲಿ ಶುಕ್ರವಾರ ಆದಿತ್ಯ ಎಲ್1 ಆಕೃತಿ ಹೊತ್ತ ಇಸ್ರೋ ವಿಜ್ಞಾನಿಗಳ ತಂಡ ತಿರುಮಲ ತಿಮ್ಮಪ್ಪನನ್ನು ಭೇಟಿ ಮಾಡಿ ಸೂಳ್ಳೂರುಪೇಟೆಯ ಚೆಂಗಲಮ್ಮ ಪರಮೇಶ್ವರಿ ಸನ್ನಿಧಿಯಲ್ಲೂ ವಿಶೇಷ ಪೂಜೆ ನಡೆಸಿದೆ.

ಈ ಬಾಹ್ಯಾಕಾಶ ನೌಕೆಯನ್ನು PSLV-C57 ನಿಂದ ಉಡಾವಣೆ ಮಾಡಲಾಗುವುದು. ನೀವು ISRO ವೆಬ್‌ಸೈಟ್ isro.gov.in, Facebook ಖಾತೆ https://facebook.com/ISRO ಮತ್ತು youtube.com/watch?v=_IcgGYZTXQw ಯೂಟ್ಯೂಬ್ ಚಾನೆಲ್‌ನಲ್ಲಿ ಈ ಉಡಾವಣೆಯನ್ನು ಲೈವ್ ಆಗಿ ವೀಕ್ಷಿಸಬಹುದಾಗಿದೆ.

Advertisement

ಆದಿತ್ಯ L1 ಅನ್ನು ಸೂರ್ಯ-ಭೂಮಿಯ ವ್ಯವಸ್ಥೆಯ ಲಾಗ್ರೇಂಜ್ ಪಾಯಿಂಟ್ 1 (L1) ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement