ಬೆಂಗಳೂರು; ಭಾರತದ ಆದಿತ್ಯ L-1 ಮೊದಲ ಬಾರಿಗೆ ಸೌರ ಜ್ವಾಲೆಗಳ ಹೈ-ಎನರ್ಜಿ ಎಕ್ಸ್‌ರೇ ಫೋಟೋಗಳನ್ನು ಕ್ಲಿಕ್ಕಿಸಿದೆ.
ಸೌರ ವಾತಾವರಣದ ಹಠಾತ್ ಸ್ಫೋಟವನ್ನು ಸೌರ ಜ್ವಾಲೆ ಎಂದು ಕರೆಯಲಾಗುತ್ತದೆ. ಹೈ ಎನರ್ಜಿ L1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟೋಮೀಟರ್ (HEL10S) ಈ ಹಠಾತ್ ಸ್ಫೋಟವನ್ನು ಸೆರೆಹಿಡಿದಿದೆ.
ಈ ಸ್ಫೋಟದ ತೀವ್ರತೆಯನ್ನೂ ಇಸ್ರೋ ಉಪಗ್ರಹ ದಾಖಲಿಸಿದೆ. ಈ ಮೂಲಕ ಸೂರ್ಯನ ಸ್ಫೋಟಕ ಶಕ್ತಿ ಬಿಡುಗಡೆ ಮತ್ತು ಸೂರ್ಯನಲ್ಲಿ ಎಲೆಕ್ಟ್ರಾನ್ ವೇಗವರ್ಧನೆಯ ಬಗ್ಗೆ ಹೆಚ್ಚಿನ ವಿವರ ಸಿಗುವಂತೆ ಮಾಡಬಹುದಾಗಿದೆ.