ದೇಶದಲ್ಲಿ ಮೈ ಆಧಾರ್ ಪೋರ್ಟಲ್ ಮೂಲಕ ಉಚಿತವಾಗಿ ಆಧಾರ್ ಕಾರ್ಡ್ಗಳನ್ನು ಅಪ್ಡೇಟ್ ಮಾಡುವ ವ್ಯವಸ್ಥೆಯನ್ನು ಮತ್ತೆ ಜೂ.14ರವರೆಗೆ ವಿಸ್ತರಿಸಲಾಗಿದೆ.
ಈ ಬಗ್ಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಖಐಡಿಎಐ) ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಈ ಗಡುವು ಮುಗಿದ ಬಳಿಕ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ಆಧಾರ್ ಕಾರ್ಡ್ನಲ್ಲಿ ತಿದ್ದುಪಡಿ ಮಾಡಬೇಕಾದರೆ 50ರೂ. ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.
ಈ ಮೊದಲು 2023ರ ಸೆ.14, ಡಿ.14 & ಮತ್ತೆ ಮೂರನೇ ಬಾರಿಗೆ ಮಾ.14ರವರೆಗೆ ಉಚಿತ ಅಪ್ಡೇಟ್ಗೆ ಗಡುವು ನೀಡಲಾಗಿತ್ತು.