ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಕೊಳ್ಳಲು ವೆಬ್ಸೈಟ್ ಲಿಂಕ್ ಬಿಡುಗಡೆ..! ಉಚಿತವಾಗಿ ನವೀಕರಣಕ್ಕೆ 14 ಮಾರ್ಚ 2024 ಕೊನೆಯ ದಿನ

WhatsApp
Telegram
Facebook
Twitter
LinkedIn

ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಕೊಳ್ಳಲು ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಲಾಗಿದ್ದು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಉಚಿತವಾಗಿ ಆಧಾರ್ ಕಾರ್ಡ ನವೀಕರಣ(Aadhar card update)ಮಾಡಿಕೊಳ್ಳಬಹುದಾಗಿದೆ.

ಆಧಾರ್ ಕಾರ್ಡ ಅನ್ನು ಮಾಡಿಕೊಂಡು 10 ವರ್ಷ ಪೂರೈಸಿದರು ಇನ್ನು ಮುಂದೆ ಸರಕಾರಿ ಯೋಜನೆಗಳ ಸೌಲಭ್ಯ ಪಡೆಯಲು ನಿಮ್ಮ ಆಧಾರ್ ಕಾರ್ಡ ನೈಜನೆಯನ್ನು ಖಚಿತಪಡಿಸಲು ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಕೊಳ್ಳುವುದನ್ನು ಯುಐಡಿಎಐ(UIDAI)- ಆಧಾರ್ ಕಾರ್ಡ ಪ್ರಾಧಿಕಾರದಿಂದ ಕಡ್ಡಾಯಗೊಳಿಸಲಾಗಿದ್ದು ಆಧಾರ್ ಕಾರ್ಡ ನ ಅಧಿಕೃತ ವೆಬ್ಸೈತ್ ಭೇಟಿ ಮಾಡಿ 14 ಮಾರ್ಚ 2024ರ ಒಳಗಾಗಿ ಉಚಿತವಾಗಿ ನಿಮ್ಮ ಆಧಾರ್ ಕಾರ್ಡ ಅನ್ನು ನವೀಕರಣ ಮಾಡಿಕೊಳ್ಳಬಹುದು.

ಆಧಾರ್ ಕಾರ್ಡ ಅನ್ನು ಏಕೆ? ನವೀಕರಣ ಮಾಡಿಕೊಳ್ಳಬೇಕು:

ಆಧಾರ್ ಕಾರ್ಡ ಹೊಂದಿ ಹತ್ತು(10) ವರ್ಷ ಅಗಿರುವವರು ತಾವು ನೋದಣಿ ಮಾಡಿಕೊಂಡಿರುವ ಸಮಯದಲ್ಲಿ ನಮೂದಿಸಿರುವ ವಿಳಾಸ ಮತ್ತು ತಮ್ಮ ಗುರುತಿನ ವಿವರವನ್ನು ಕಡ್ಡಾಯವಾಗಿ ನವೀಕರಿಸಲು ಯುಐಡಿಎಐ(UIDAI) ಸೂಚಿಸಲಾಗಿದೆ, ಈ ಕೆಲಸ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಸರಕಾರಿ ಯೋಜನೆಗಳಡಿ ಸೌಲಭ್ಯ ಪಡೆಯಲು ಅಗುವುದಿಲ್ಲ ಅದರಿಂದ ಇದನ್ನು ನಿರ್ಲಕ್ಷ ಮಾಡದಿರಲು ಸೂಚಿಸಿದೆ.

ರಾಜ್ಯದಲ್ಲಿ ಆಧಾರ್ ಕಾರ್ಡ ಹೊಂದಿ 10 ವರ್ಷ ಮೇಲ್ಪಟ್ಟ ನಾಗರೀಕರು ಆಧಾರ್ ನೋದಣಿ ಸಮಯದಲ್ಲಿ ನಮೂದಿಸಿದ ವಿಳಾಸದಲ್ಲಿ ಈಗಲೂ ಇದ್ದರೂ ಸಹಿತ ಅಂತಹ ಆಧಾರ ಕಾರ್ಡಗಳು ನಿಷ್ಕ್ರಿಯವಾಗುತ್ತಿರುವುದರಿಂದ 11 ವರ್ಷ ಮೇಲ್ಪಟ್ಟ ಆಧಾರ್ ಕಾರ್ಡ ಹೊಂದಿದವರು ಹಾಗೂ ಇಲ್ಲಿಯವರೆಗೂ ಆಧಾರ್ ಕಾರ್ಡ ನವೀಕರಿಸದೇ ಇರುವವರು ತಮ್ಮ ವೈಯಕ್ತಿಕ ಗುರುತಿನ ದಾಖಲೆ (Proof of Ilitity ) ಮತ್ತು ವಿಳಾಸದ ದಾಖಲೆಗಳೊಂದಿಗೆ (Proof of Address) ಹತ್ತಿರದ ಆಧಾರ ನೋಂದಣಿ ಕೇಂದ್ರದಲ್ಲಿ ಆಧಾರ್ ಪ್ರಾಧಿಕಾರ(UIDAI) ರವರು ಅಭಿವೃದ್ಧಿಪಡಿಸಿರುವ ಹೊಸ ವೈಶಿಷ್ಟ ದಾಖಲಾತಿ ನವೀಕರಣ ತಂತ್ರಾಂಶದಲ್ಲಿ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿರುತ್ತದೆ.

ಉಚಿತ ನವೀಕರಣಕ್ಕೆ ಕೊನೆಯ ದಿನಾಂಕ:

ಯುಐಡಿಎಐ(UIDAI)- ಆಧಾರ್ ಕಾರ್ಡ ಪ್ರಾಧಿಕಾರ ಅಧಿಕೃತ ವೆಬ್ಸೈಟ್ ನಲ್ಲಿ ನಮೂದಿಸಿರುವ ಮಾಹಿತಿಯನ್ವಯ ಉಚಿತವಾಗಿ ಸಾರ್ವಜನಿಕರು ಆಧಾರ್ ಕಾರ್ಡ ನವೀಕರಣ ಮಾಡಿಕೊಳ್ಳಲು 14 ಮಾರ್ಚ 2024 ಕೊನೆಯ ದಿನವಾಗಿದೆ.

ಆಧಾರ್ ಅಪ್ ಡೇಟ್ ಮಾಡಲು ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬಹುದು?

1) ಪಡಿತರ ಚೀಟಿಗಳು ಅಥವಾ ಮತದಾರರ ಗುರುತಿನ ಚೀಟಿಗಳು,

2) ಸರ್ಕಾರ ನೀಡಿದ ಗುರುತಿನ ಚೀಟಿಗಳು / ವಿಳಾಸದ ಪುರಾವೆಗಳು ಮತ್ತು ಭಾರತೀಯ ಪಾಸ್ಪೋರ್ಟ್ಗಳು ಗುರುತಿನ ಮತ್ತು ವಿಳಾಸ ಎರಡಕ್ಕೂ ಪುರಾವೆಯಾಗಿ ಕಾರ್ಯನಿರ್ವಹಿಸುತ್ತವೆ.

3) ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಸೆಕೆಂಡರಿ ಅಥವಾ ಸೀನಿಯರ್ ಸೆಕೆಂಡರಿ ಶಾಲಾ ಅಂಕಪಟ್ಟಿ / ಛಾಯಾಚಿತ್ರವನ್ನು ಹೊಂದಿರುವ ಶಾಲಾ ಬಿಡುವ ಪ್ರಮಾಣಪತ್ರ, ಸರ್ಕಾರ ನೀಡಿದ ಗುರುತಿನ ಚೀಟಿ / ಪ್ರಮಾಣಪತ್ರ – ಗುರುತಿನ ಪುರಾವೆಯಾಗಿ ಮಾತ್ರ ಕಾರ್ಯನಿರ್ವಹಿಸುತ್ತವೆ.ವಿದ್ಯುತ್ / ನೀರು / ಗ್ಯಾಸ್ ಬಿಲ್ (ಕಳೆದ 3 ತಿಂಗಳು), ಬ್ಯಾಂಕ್ / ಪೋಸ್ಟ್ ಆಫೀಸ್ ಪಾಸ್ಬುಕ್, ಬಾಡಿಗೆ / ಗುತ್ತಿಗೆ / ರಜೆ ಮತ್ತು ಪರವಾನಗಿ ಒಪ್ಪಂದವು ವಿಳಾಸದ ಪುರಾವೆಯಾಗಿ ಮಾತ್ರ ಕಾರ್ಯನಿರ್ವಹಿಸುತ್ತದೆ.

ಈ ಮೇಲಿನವುಗಳಲ್ಲಿ ಯಾವುದಾದ 2 ದಾಖಲೆಗಳನ್ನು ಅನ್ಲೈನ್ ಮೂಲಕ ಅಪ್ಲೋಡ್ ಮಾಡಿ ನಿಮ್ಮ ಆಧಾರ್ ಕಾರ್ಡ ಅನ್ನು ನವೀಕರಣ ಮಾಡಿಕೊಳ್ಳಬಹುದು.

ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಕೊಳ್ಳಲು ವೆಬ್ಸೈಟ್ ಲಿಂಕ್ ಬಿಡುಗಡೆ:

ಸಾರ್ವಜನಿಕರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಆಧಾರ್ ಪ್ರಾಧಿಕಾರದ(UIDAI) ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ತಮ್ಮ ಮೊಬೈಲ್ ನಲ್ಲೇ ಅಧಾರ್ ಕಾರ್ಡ ನವೀಕರಣ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಈ Aadhar update link ಲಿಂಕ್ ಮೇಲೆ ಕ್ಲಿಕ್ ಮಾಡಿ ಆಧಾರ್ ಪ್ರಾಧಿಕಾರದ(UIDAI) ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು ತದನಂತರ ಅರ್ಜಿದಾರರ ಅಧಾರ್ ಕಾರ್ಡ ನಂಬರ್ ಮತ್ತು ಕ್ಯಾಪ್ಚ ಕೋಡ್ ಅನ್ನು ನಮೂದಿಸಿ “Login With OTP” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಇದಾದ ಬಳಿಕ ನಿಮ್ಮ ಮೊಬೈಲ್ ಗೆ ಬರುವ OTP ಅನ್ನು ನಮೂದಿಸಿ “Login” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ನಂತರ ಎರಡು ಬಾರಿ ಬರುವ “Next” ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ವಿಳಾಸದ ವಿವರ ತೋರಿಸುತ್ತದೆ ಈ ವಿವರವನ್ನು ಒಮ್ಮೆ ಸರಿಯಾಗಿದಿಯಾ? ಎಂದು ಚೆಕ್ ಮಾಡಿ “I verify that the above details are correct” ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತೆ “Next” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಇದಾದ ಬಳಿಕ ಈ ಪೇಜ್ ನಲ್ಲಿ ನಿಮ್ಮ ಹೆಸರು ಮತ್ತು ವಿಳಾಸ ದೃಡೀಕರಣಕ್ಕೆ ಪಾನ್ ಕಾರ್ಡ(Pan card) ಮತ್ತು ಗುರುತಿನ ಚೀಟಿಯ(Voter ida) PDF ಪೈಲ್ ಅನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “Next” ಬಟನ್ ಮೇಲೆ ಕ್ಲಿಕ್ ಮಾಡಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ ನವೀಕರಣವಾಗುತ್ತದೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon