ಬೆಂಗಳೂರು: ಜಾಗತಿಕ ಆಧ್ಯಾತ್ಮಿಕ ಗುರು, ಮಾನವತಾವಾದಿ ನಾಯಕ ಗುರುದೇವ್ ಶ್ರೀ ಶ್ರೀ ರವಿಶಂಕರ್ ಗುರೂಜಿಗೆ (Ravi Shankar) ದಕ್ಷಿಣ ಪೆಸಿಫಿಕ್ ರಾಷ್ಟ್ರವಾದ ಫಿಜಿ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಾನವ ಸ್ಫೂರ್ತಿಯನ್ನು ನಿರಂತರವಾಗಿ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅವರು ಮಾಡುತ್ತಿರುವ ವಿವಿಧ ಸಮುದಾಯಗಳನ್ನು ಶಾಂತಿ ಮತ್ತು ಸಾಮರಸ್ಯದ ಮೂಲಕ ಒಂದಾಗಿಸುವ ಅವರ ಕಾರ್ಯಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ರವಿಶಂಕರ್ ಗುರೂಜಿಗೆ “ಹಾನರರಿ ಆಫಿಸರ್ ಆಫ್ ದಿ ಆರ್ಡರ್ ಆಫ್ ಫೀಜಿ” ಬಿರುದನ್ನು ಫಿಜಿ ರೀಪಬ್ಲಿಕ್ನ ಅಧ್ಯಕ್ಷ ಹೆಚ್.ಇ ರಟು ವಿಲ್ಲಿಯಮೆ ಎಂ. ಕಟೋನಿವೆರಿ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಆ ಮೂಲಕ ರವಿಶಂಕರ್ ಗುರೂಜಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡುವತ್ತಿರುವ ಆರನೇ ದೇಶವಾಗಿ ಫಿಜಿ ಹೊರಹೊಮ್ಮದೆ.
ಆರ್ಟ್ ಆಫ್ ಲಿವಿಂಗ್ ಮೂಲಕ ರವಿಶಂಕರ್ ಗುರೂಜಿ ಕಳೆದ 43 ವರ್ಷಗಳಿಂದ ಜನ ಸಮೂಹಕ್ಕೆ ಸಂತೋಷ ಮತ್ತು ಸಾಮರಸ್ಯವನ್ನು ಹರಡುತ್ತಿದ್ದಾರೆ. ಇದರೊಂದಿಗೆ ಅವರು ಮಾನಸಿಕ ಆರೋಗ್ಯ, ಶಿಕ್ಷಣ, ಪರಿಸರ, ಮಹಿಳಾ ಹಾಗೂ ಯುವಕ ಸಬಲೀಕರಣ, ಒತ್ತಡ ನಿವಾರಣೆ, ಧ್ಯಾನ ಹೀಗೆ ಅನೇಕಾನೇಕ ಕ್ಷೇತ್ರಗಳಲ್ಲಿ ಅವರು ನಿರ್ವಹಿಸುತ್ತಿರುವ ಕಾರ್ಯಗಳಿಗಾಗಿ ಈ ಪ್ರಶಸ್ತಿ ನೀಡಲಾಗಿದೆ.