ಮುಂಬೈ:ಆನ್‍ಲೈನ್ ಗೇಮ್‌ನಲ್ಲಿ ಉದ್ಯಮಿಯೊಬ್ಬರು 5 ಕೋಟಿ ಗೆದ್ದು, ಸುಮಾರು 58 ಕೋಟಿ ರೂ. ಕಳೆದುಕೊಂಡ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ.
ಈ ಕುರಿತು ಉದ್ಯಮಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆ ದೂರಿನ ಆಧಾರದ ಮೇಲೆ ಶಂಕಿತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 14 ಕೋಟಿ ರೂಪಾಯಿ ಹಣ , 4 ಕೆಜಿ ಚಿನ್ನ ಪತ್ತೆಯಾಗಿರುವುದನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಂಚಿಸಿದ ಆರೋಪಿ ಅನಂತ್ ಅಲಿಯಾಸ್ ಸೊಂತು ನವರತನ್ ಜೈನ್ ಎಂದು ಗುರುತಿಸಲಾಗಿದೆ. ನಾಗ್ಪುರದಿಂದ 160 ಕಿಮೀ ದೂರದಲ್ಲಿರುವ ಈತನ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ನವರತನ್ ಜೈನ್ ದುಬೈಗೆ ಹಾರುವ ಮೂಲಕ ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಉದ್ಯಮಿಗೆ ಪರಿಚಯವಾದ ಜೈನ್ ಆನ್‍ಲೈನ್ ಗೇಮ್‌ನಲ್ಲಿ ಹಣ ಗಳಿಸಬಹುದೆಂದು ಪ್ರೇರೆಪಿಸಿದ್ದಾರೆ. ಉದ್ಯಮಿ ಅಂತಿಮವಾಗಿ ಜೈನ್ ಮನವೊಲಿಕೆಗೆ ಒಪ್ಪಿಕೊಂಡರು. ಅಲ್ಲದೆ ಹವಾಲಾ ವ್ಯಾಪಾರಿಯ ಮೂಲಕ 8 ಲಕ್ಷವನ್ನು ವರ್ಗಾಯಿಸಿದ್ದಾರೆ ಎಂದು ನಾಗ್ಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ತಿಳಿಸಿದರು.
ಉದ್ಯಮಿಗೆ ಗೇಮ್‌ನಲ್ಲಿ 5 ಕೋಟಿ ರೂ. ಮಾತ್ರ ಲಾಭದ ರೀತಿಯಲ್ಲಿ ವಾಪಸ್ ಬಂದಿದೆ. ಹೀಗಾಗಿ ಅನುಮಾನಗೊಂಡ ಉದ್ಯಮಿ ಹಣ ವಾಪಸ್ ನೀಡುವಂತೆ ಆರೋಪಿಗೆ ಕೇಳಲಾಗಿದೆ ಆದರೆ ಇದಕ್ಕೆ ಒಪ್ಪದ ಹಿನ್ನಲೆ ಹಣ ಕಳೆದುಕೊಂಡ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದಾರೆ.