ನವದೆಹಲಿ: ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಮುಂದುವರಿದಿದ್ದು ಭಾರತೀಯ ರಕ್ಷಣಾ ಕಾರ್ಯ ಮುಂದುವರಿದಿದೆ. ಆಪರೇಷನ್ ಅಜಯ್ ಯೋಜನೆಯ ಅಂಗವಾಗಿ ಇಸ್ರೇಲ್ ನಲ್ಲಿ ಸಿಲುಕಿರುವ ಭಾರತೀಯರನ್ನ ತವರಿಗೆ ವಾಪಸ್ ಕರೆ ತರಲಾಗುತ್ತಿದೆ.
ಯುದ್ಧ ಪೀಡಿತ ಇಸ್ರೇಲ್‌ನಿಂದ ಭಾರತೀಯ ಪ್ರಜೆಗಳನ್ನು ಹೊತ್ತ ಎರಡನೇ ವಿಮಾನ ಶನಿವಾರ ಮುಂಜಾನೆ ನವದೆಹಲಿಗೆ ಬಂದಿಳಿದಿದೆ. ಎರಡು ಶಿಶುಗಳು ಸೇರಿದಂತೆ 235 ಭಾರತೀಯರನ್ನು ಹೊತ್ತ ವಿಮಾನ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಇವರನ್ನು ಕೇಂದ್ರ ಶಿಕ್ಷಣ ರಾಜ್ಯ ಖಾತೆ ಸಚಿವ ರಾಜಕುಮಾರ ರಂಜನ್ ಸಿಂಗ್ ಅವರನ್ನು ಸ್ವಾಗತಿಸಿದರು.
ಎರಡನೇ ವಿಮಾನವು ಸ್ಥಳೀಯ ಕಾಲಮಾನ ರಾತ್ರಿ 11.02 ಕ್ಕೆ ಟೇಕಾಫ್ ಆಗಿತ್ತು. ಮೊದಲ ಬ್ಯಾಚ್ನಲ್ಲಿ 212 ಜನರು ಭಾರತಕ್ಕೆ ಆಗಮಿಸಿದ್ದರು.