ಬಾಗಲಕೋಟೆ: ಲೋಕಸಭಾ ಚುನಾವಣೆಗೂ ಮೊದಲೇ ಸಾಕಷ್ಟು ಬದಲಾವಣೆ ಆಗುತ್ತೆ. ಆಪರೇಷನ್ ಹಸ್ತ ಆಗಲ್ಲ, ಆಪರೇಷನ್ ಕಮಲ ಆಗುತ್ತೆ ಕಾದುನೋಡಿ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಮಾಧ್ಯಮಕ್ಕೆ ಮಾತನಾಡಿದ ಅವರು, ಈ ಸರ್ಕಾರ ಬಂದಮೇಲೆ ಯಾವುದೇ ಅಭಿವೃದ್ಧಿ ಕಾರ್ಯ ನಡೀತಿಲ್ಲ. ಬಿಟ್ಟಿ ಭಾಗ್ಯದಿಂದ ಈ ವರ್ಷ 25,000 ಕೋಟಿ ರೂ. ಖರ್ಚು ಮಾಡಲ್ಲ. ಇದರಿಂದ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರು ಬಹಳ ಬೇಸತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವವರಿಗೆ ಬಸ್ನಲ್ಲಿ ಸೀಟ್ ಸಿಗುತ್ತಿಲ್ಲ. ಮನೆ, ಸಣ್ಣ ಕೈಗಾರಿಕೆಗಳಿಗೆ ಕನಿಷ್ಠ 60% ಹೆಚ್ಚುವರಿ ಬಿಲ್ ಬರುತ್ತಿದೆ. ಕರ್ನಾಟಕದಲ್ಲಿ ಈಗ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಒಬ್ಬರು ಐದು ವರ್ಷ ಸಿಎಂ ಇರಲಿ ಅಂತಾರೆ, ಇನ್ನಿಬ್ಬರು ಎರಡುವರೆ ವರ್ಷಕ್ಕೆ ಸಿಎಂ ಬದಲಾಗುತ್ತಾರೆ ಅಂತಾರೆ. ಇದನ್ನ ನೋಡಿದರೆ ಆದಷ್ಟು ಬೇಗ ಸರ್ಕಾರ ಬೀಳುತ್ತೆ ಎಂದು ಕಿಡಿಕಾರಿದರು.