ಹೊಸಪೇಟೆ: ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಇಲಾಖೆಯಿಂದ 2023-24ನೇ ಸಾಲಿನ ರಾಷ್ಟಿçÃಯ ಆರೋಗ್ಯ ಅಭಿಯಾನದ ಕಾರ್ಯಕ್ರಮದಡಿಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವಿರ: ಜಿಲ್ಲಾ ಕುಷ್ಠರೋಗ ಸಲಹೆಗಾರರು, ಪ್ರೋಗ್ರಾಮರ್/ ಆಪರೇಷನಲ್ ಮ್ಯಾನೇಜರ್, ಕ್ಲಿನಿಕಲ್ ಸೈಕಾಲಜಿಸ್ಟ್, ಕಮ್ಯೂನಿಟಿ ನರ್ಸ್, ಸೈಕಿಯಾಟ್ರಿಕ್ ನರ್ಸ್, ಈ ಎಲ್ಲಾ ಹುದ್ದೆಗಳಲ್ಲಿ ತಲಾ ಒಂದು ಹುದ್ದೆಗಳು ಖಾಲಿ ಇದ್ದು, ಅರ್ಹತೆ ಹಾಗೂ ಹೆಚ್ಚಿನ ಮಾಹಿತಿಯು ವಿಜಯನಗರ ವೆಬ್‌ಸೈಟ್ https://vijayanagara.nic.in/ ನಲ್ಲಿ ಲಭ್ಯವಿರುತ್ತದೆ.
ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚುಗೊಳಿಸುವುದು ಅಥವಾ ಕಡಿಮೆಗೊಳಿಸುವುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ನಿರ್ಧಾರದಂತಿರುತ್ತದೆ. ಆಯ್ಕೆಯ ಪ್ರಕ್ರಿಯೆ ಯಾವುದೇ ಬದಲಾವಣೆಯಾದರೂ ಆಯ್ಕೆ ಸಮಿತಿ ತಿರ್ಮಾನವೇ ಅಂತಿಮವಾಗಿರುತ್ತದೆ. ಕೋವಿಡ್-19ರಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದವರಿಗೆ ಆದ್ಯತೆ ನೀಡಲಾಗುವುದು. ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇಕಡ 2, 6 ತಿಂಗಳು 1 ದಿನದಿಂದ 12 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇಕಡ 4, 12 ತಿಂಗಳು 1 ದಿನದಿಂದ 18 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇಕಡ 6, 18 ತಿಂಗಳು 1 ದಿನದಿಂದ 24 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇಕಡ 8 ಕೃಪಾಂಕವನ್ನು ನೀಡಲಾಗುವುದು. ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಶೇಕಡ ಮತ್ತು ಕೋವಿಡ್-19 ಸೇವಾ ಅವಧಿಯ ಕೃಪಾಂಕವನ್ನು ಒಟ್ಟುಗೂಡಿಸಿ ಮೇರಿಟ್ ಲಿಸ್ಟ್ನ್ನು ತಯಾರಿಸಲಾಗುವುದು ಮತ್ತು ಹೊಸ ರೋಸ್ಟರ್ ಆಧಾರ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೇಮಕಾತಿ ಮಾಡಲಾಗುವುದು.
ಅರ್ಜಿ ಸಲ್ಲಿಸಲು ನವೆಂಬರ್ 01 ಕೊನೆಯ ದಿನವಾಗಿದ್ದು, ಅರ್ಹ ಅಭ್ಯರ್ಥಿಗಳು ಕಛೇರಿಯ ಸಮಯದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳ ಕಾರ್ಯಾಲಯ, 60 ಹಾಸಿಗೆ ಎಮ್.ಸಿ.ಹೆಚ್. ಆಸ್ಪತ್ರೆ ಪಕ್ಕದಲ್ಲಿ ಮಸೀದಿ ಹತ್ತಿರ ಹೊಸಪೇಟೆ ಇಲ್ಲಿಂದ ಅರ್ಜಿಯನ್ನು ಪಡೆದು ನಿಗದಿತ ಅವಧಿಯ ಸಂಜೆ 05:30 ರ ಒಳಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿ ಸಲ್ಲಿಸುವ ವೇಳೆ ಸ್ವಯಂ ದೃಢೀಕರಿಸಿದ ಎಲ್ಲಾ ದಾಖಲಾತಿಗಳ ಪ್ರತಿಗಳನ್ನು ಅರ್ಜಿಗಳೊಂದಿಗೆ ಸಲ್ಲಿಸಬೇಕು ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ ರಾಧಿಕಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.