ನೆಲ್ಲಿಕಾಯಿ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರುವುದು ಸಹಜ. ಕಿತ್ತಳೆ ಹಣ್ಣಿಗಿಂತಲೂ 20 ಪಟ್ಟು ಹೆಚ್ಚು ವಿಟಮಿನ್ ಸಿ ಇದರಲ್ಲಿದೆ. ನೆಲ್ಲಿಕಾಯಿ ಕೇವಲ ಹುಳಿ ಅಥವಾ ಕಹಿ ಆಗಿರುವುದಿಲ್ಲ. ಇದನ್ನು ತಿಂದು ನೀರು ಕುಡಿದರೆ ಬಾಯಿ ಸಿಹಿಯಾಗುತ್ತದೆ. ನೆಲ್ಲಿಕಾಯಿ ತಿನ್ನಲು ಹುಳಿ ಎನ್ನುವವರು ನೀವಾಗಿದ್ದರೆ ಅದನ್ನು ಉಪ್ಪಿನಕಾಯಿ, ಚಟ್ಟಿ ಇಲ್ಲವೇ ತಂಬುಳಿ ಮಾಡಿ ಸವಿಯಿರಿ. ಅದನ್ನು ಉಪ್ಪು ನೀರಿನಲ್ಲಿ ನೆನೆಸಿಟ್ಟು ವರ್ಷದವರೆಗೂ ಬಳಸುತ್ತಿರಬಹುದು.ನೆಲ್ಲಿಕಾಯಿಯನ್ನು ಸಣ್ಣಗೆ ಕತ್ತರಿಸಿ ನೀರಿನೊಂದಿಗೆ ಕುದಿಸಿ, ಚಿಟಿಕೆ ಅರಶಿನ ಪುಡಿ ಸೇರಿಸಿ ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಹಸಿ ನೆಲ್ಲಿಕಾಯಿ ಜಜ್ಜಿ ರಸಕ್ಕೆ ಮುಲ್ತಾನಿ ಮಿಟ್ಟಿ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಹೊಳಪು ಹೆಚ್ಚಿ ಕಾಂತಿಯುತಗೊಳ್ಳುತ್ತದೆ. ನೆಲ್ಲಿಕಾಯಿ ರಸಕ್ಕೆ ಜೇನುತುಪ್ಪ ಬೆರೆಸಿ ಸವಿಯುವುದರಿಂದ ಉಸಿರಾಟದ ಸಮಸ್ಯೆಗಳು, ಹೃದಯ ಸಂಬಂಧಿ ರೋಗಗಳು ದೂರವಾಗುತ್ತವೆ. ನೆಲ್ಲಿಕಾಯಿ ರಸಕ್ಕೆ ಬೆಲ್ಲ ಸೇರಿಸಿ ಕುಡಿಯುವುದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ. ಕಫ ನಿವಾರಿಸುವ ಶಕ್ತಿಯೂ ನೆಲ್ಲಿಕಾಯಿಗಿದೆ. ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವ ನೆಲ್ಲಿಕಾಯಿ ದೇಹದ ತೂಕ ಇಳಿಸಲೂ ಉಪಕಾರಿ.ತಲೆ ಕೂದಲಿಗೆ ಹಚ್ಚುವ ಎಣ್ಣೆಯನ್ನು ತುಸು ಬಿಸಿ ಮಾಡಿ. ಮೊದಲೇ ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಂಡ ನೆಲ್ಲಿಕಾಯಿ ತುಂಡುಗಳನ್ನು ಹಾಕಿ ಕುದಿಸಿ. ಎರಡು ಗಂಟೆ ಹೊತ್ತು ತಣಿಯಲು ಬಿಡಿ. ಬಳಿಕ ಪ್ರತಿದಿನ ಇದನ್ನು ತಲೆಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಉದ್ದವಾಗಿ ಬೆಳೆಯುತ್ತದೆ. ನೆಲ್ಲಿಕಾಯಿ ಸೇವನೆ ಮಾಡಿದರೆ ಅದರಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿ ಆಗುವುದು ಮತ್ತು ಕಾಯಿಲೆಗಳ ವಿರುದ್ಧ ರಕ್ಷಣೆ ಸಿಗುವುದು. ಕೆಮ್ಮು, ಶೀತ ಮತ್ತು ಶ್ವಾಸಕೋಸದ ಸಮಸ್ಯೆಗಳನ್ನು ಇದು ದೂರವಿಡುವುದು. ಕೂದಲು ಉದುರುವಿಕೆ, ಬಿಳಿಯಾಗುವ ಸಮಸ್ಯೆಗೂ ಇದು ಪರಿಣಾಮಕಾರಿ.ಇದರಲ್ಲಿ ಇರುವಂತಹ ಪ್ರಬಲ ಆಂಟಿಆಕ್ಸಿಡೆಂಟ್ ಅ0ಶವು ಕೂದಲು ಮತ್ತು ಚರ್ಮವನ್ನು ರಕ್ಷಿಸುವುದು. ಹೊಸ ಅಂಗಾಂಶಗಳು ಬೆಳೆಯಲು ಇದು ಸಹಕಾರಿ ಕೂಡ. ಕೂದಲು ಗಂಟು ಕಟ್ಟುವುದು, ಬಿಸಿಲಿನ ಸುಟ್ಟು ಕಲೆಗಳೂ ಮತ್ತು ಬಿಸಿಲಿನಿಂದ ಆಗಿರುವ ಹಾನಿಯನ್ನು ಇದು ತಡೆಯುವುದು. ಇಂದಿನ ಹೆಚ್ಚಿನ ಶಾಂಪೂಗಳಿಗೆ ನೆಲ್ಲಿಕಾಯಿ ಬಳಕೆ ಮಾಡುವುದನ್ನು ಪ್ರಚಾರ ಮಾಡುವುದನ್ನು ನೀವು ನೋಡಿರಬಹುದು. ನೆಲ್ಲಿಕಾಯಿ ಶಾಂಪೂ ಬಳಕೆ ಮಾಡಿದರೆ, ಅದು ಕೂದಲನ್ನು ಕಾಂತಿಯುತವಾಗಿಸುವುದು.ಮನೆಯಲ್ಲೇ ಇದನ್ನು ತಯಾರಿಸಲು ಒಂದು ಒಂದು ಹಿಡಿ, ನೆಲ್ಲಿಕಾಯಿ ಮತ್ತು ಶಿಕಾಕಾಯಿ ತೆಗೆದುಕೊಂಡು ಅದನ್ನು ಒಂದು ಲೀಟರ್ ನೀರಿಗೆ ಹಾಕಿ ಮತ್ತು ರಾತ್ರಿಯಿಡಿ ಹಾಗೆ ನೆನೆಯಲು ಬಿಡಿ.ಮರುದಿನ ಬೆಳಗ್ಗೆ ಇದನ್ನು ಹದ ಬೆಂಕಿಯಲ್ಲಿ ಕುದಿಸಿ ಮತ್ತು ನೀರಿನ ಪ್ರಮಾಣವು ಅರ್ಧದಷ್ಟು ಆಗುವ ತನಕ ಕುದಿಸಿ. ದೊಡ್ಡ ಬೆಂಕಿಯಲ್ಲಿ ಕುದಿಸಬೇಡಿ. ತುಂಬಾ ಕಡಿಮೆ ಬೆಂಕಿಯಲ್ಲಿ ಕುದಿಸಿ. ಇದರ ಬಳಿಕ ಮಿಶ್ರಣವು ತಂಪಾಗಲು ಬಿಡಿ ಮತ್ತು ಇದನ್ನು ಸೋಸಿಕೊಂಡು ಅದರಿಂದ ಕೂದಲು ತೊಳೆಯಿರಿ. ಇದನ್ನು 3-4 ದಿನಗಳ ಕಾಲ ಫ್ರಿಡ್ಜ್ ನಲ್ಲಿ ಇಡಬಹುದು. ಕೂದಲಿಗೆ ನೆಲ್ಲಿಕಾಯಿ ಎಣ್ಣೆಯನ್ನು ತಯಾರಿಸಿಕೊಳ್ಳಲು ನೆಲ್ಲಿಕಾಯಿಯನ್ನು ತುರಿದುಕೊಂಡು ಅದನ್ನು 100 ಮಿ.ಲೀ. ತೆಂಗಿನೆಣ್ಣೆಗೆ ಹಾಕಿ. ಇದನ್ನು ಹಾಗೆ ಗಾಜಿನ ಬಾಟಲಿಗೆ ಹಾಕಿ ಮುಚ್ಚಳ ಹಾಕಿಡಿ. ಪ್ರತಿನಿತ್ಯವೂ ಇದನ್ನು ಬಿಸಿಲಿಗೆ ಇಡಬೇಕು. 15 ದಿನ ಹೀಗೆ ಮಾಡಿ. ಇದರ ಬಳಿಕ ಎಣ್ಣೆಯನ್ನು ಸೋಸಿಕೊಂಡು ಬಳಸಿ. ಈ ಎಣ್ಣೆಯನ್ನು ನೇರವಾಗಿ ಕೂದಲಿಗೆ ಹಚ್ಚಿಕೊಳ್ಳಬಹುದು.