ದೆಹಲಿ: ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ನ್ಯಾಯಾಲಯವು ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಸಂದೀಪ್ ಘೋಷ್ ಅವರನ್ನು ಸೆಪ್ಟೆಂಬರ್ 23 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಸಂದೀಪ್ ಘೋಷ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಆಪಾದಿತ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದ ಆರೋಪಗಳನ್ನು ಎದುರಿಸುತ್ತಿದ್ದಾರೆ. ನ್ಯಾಯಾಲಯವು ಘೋಷ್ ಅವರ ಭದ್ರತಾ ಸಿಬ್ಬಂದಿ ಅಫ್ಸರ್ ಅಲಿ ಮತ್ತು ಗುತ್ತಿಗೆದಾರರಾದ ಬಿಪ್ಲಬ್ ಸಿನ್ಹಾ ಮತ್ತು ಸುಮನ್ ಹಜ್ರಾ ಅವರನ್ನು ಸೆಪ್ಟೆಂಬರ್ 23 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಅಗತ್ಯವಿದ್ದಲ್ಲಿ ಹೆಚ್ಚಿನ ಕಸ್ಟಡಿಗೆ ಕೋರಬಹುದು ಎಂದು ಸಿಬಿಐ ತಿಳಿಸಿದೆ.
ಕೋಲ್ಕತ್ತಾದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ಪ್ರತಿಭಟನೆಗಳ ನಡುವೆ, ಸಿಬಿಐ ಸಂತ್ರಸ್ತೆಯ ಕೊಲೆ ಬಗ್ಗೆ ಹಾಗೂ ಹಣಕಾಸಿನ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿದೆ. ಈ ಎರಡೂ ಪ್ರಕರಣಗಳ ಸಂಭವನೀಯ ಸಂಪರ್ಕವನ್ನು ತನಿಖೆ ಮಾಡುವುದನ್ನು ಮುಂದುವರೆಸಿದೆ.