ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಆಶಾಕಿರಣ ಯೋಜನೆ’ಯ ಕಾರ್ಯಕ್ರಮಕ್ಕೆ ಇಂದು ಸಿಎಂ ಹಾವೇರಿಯಲ್ಲಿ ಚಾಲನೆ ನೀಡಲಿದ್ದಾರೆ.
ಎಲ್ಲ ವಯಸ್ಸಿನವರಿಗೆ ನೇತ್ರತಪಾಸಣೆ ಮಾಡುವ ಈ ಯೋಜನೆಯಡಿ, ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಕಲ್ಬುರ್ಗಿ, ಹಾವೇರಿ, ಚಾಮರಾಜನಗರಗಳಲ್ಲಿ
56.59 ಲಕ್ಷ ಜನರನ್ನು ತಪಾಸಣೆ ಮಾಡಿದ್ದು, ದೃಷ್ಟಿದೋಷವುಳ್ಳ 2.45 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಣೆ ನಡೆಯಲಿದೆ.
39,336 ಜನರಿಗೆ ಕಣ್ಣಿನ ಪೊರೆ ಸಮಸ್ಯೆ ಇದ್ದು, ಅವರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.