ಸಿಡ್ನಿ: ತೆಲಂಗಾಣದ ಹೈದರಾಬಾದ್‌ನ ಶ್ವೇತಾ ಮಧಗಾನಿ ಎಂಬ ಮಹಿಳೆಯನ್ನು ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಕೊಲೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ವೇತಾ ಮಧಗಾನಿ ಅವರ ಶವ ಶನಿವಾರ (ಮಾರ್ಚ್ 9) ಬಕ್ಲಿಯಲ್ಲಿ ರಸ್ತೆ ಬದಿಯ ತೊಟ್ಟಿಯಲ್ಲಿ ಪತ್ತೆಯಾಗಿದೆ, ಕೊಲೆಯಲ್ಲಿ ಆಕೆಯ ಪತಿ ಅಶೋಕ್ ರಾಜ್ ಭಾಗಿಯಾಗಿರಬಹುದೆಂದು ಶಂಕಿಸಲಾಗಿದೆ. ಕೊಲೆಯ ನಂತರ ಅಶೋಕ್ ತಮ್ಮ ಮೂರು ವರ್ಷದ ಮಗನೊಂದಿಗೆ ಭಾರತಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.