ಮಂಡ್ಯ: ಆಸ್ತಿ ಆಸೆಗೆ ಪತಿಯೇ ಪತ್ನಿಯ ಕೊಲೆ ಮಾಡಲಾಗಿರುವ ಘಟನೆ ಮಂಡ್ಯದ ವಿವಿ ನಗರ ಬಡಾವಣೆಯಲ್ಲಿ ನಡೆದಿದೆ. ಮಂಡ್ಯದ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಪಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಣದ ದಾಹಕ್ಕೆ ಬಿದ್ದು ದಿಂಬು, ಬೆಡ್ಶೀಟ್ನಿಂದ ಉಸಿರುಗಟ್ಟಿಸಿ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ಹತ್ಯೆ ಮಾಡಿ ಬಳಿಕ ಸಹಜ ಸಾವೆಂದು ನಾಟಕವಾಡಿದ್ದ, ಆದರೆ ಈ ನಾಟಕ ಬಯಲಾಗಿದ್ದು ಹಂತಕ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್.ಶೃತಿ(32) ಕೊಲೆಯಾದವರು, ಟಿ.ಎನ್.ಸೋಮಶೇಖರ್(41) ಬಂಧಿತ ಆರೋಪಿ.
ಪತ್ನಿ ಶೃತಿ ಆಸ್ತಿಯ ಮೇಲೆ ಆಸೆಯಿದ್ದ ಕಾರಣಕ್ಕೆ ಕೊಂದಿರೋದಾಗಿ ಪೊಲೀಸರ ಬಂಧನದ ಬಳಿಕ ವಿಚಾರಣೆಯ ವೇಳೆ ಟಿ.ಎನ್.ಸೋಮಶೇಖರ್ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.