ಬೆಂಗಳೂರು: ಭೂ ಪರಿವೀಕ್ಷಣೆ ಉಪಗ್ರಹ EO-08 ಉಡ್ಡಯನವನ್ನು ಆಗಸ್ಟ್ 15 ಬದಲಿಗೆ ಆಗಸ್ಟ್ 16ಕ್ಕೆ ಮುಂದೂಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಘೋಷಿಸಿದೆ. ಎಸ್.ಎಸ್.ಎಲ್.ವಿ. ಡಿ-3 ಮೂಲಕ ಆಗಸ್ಟ್ 15ರಂದು ನಡೆಯಲಿದ್ದ ಉಡಾವಣೆ ಮುಂದೂಡಿರುವುದಕ್ಕೆ ಇಸ್ರೋ ಯಾವುದೇ ಕಾರಣ ನೀಡಿಲ್ಲ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದು ಮೈಕ್ರೋಸ್ಯಾಟಲೈಟ್ ನ ವಿನ್ಯಾಸ ಮತ್ತು ಅಭಿವೃದ್ಧಿ, ಮೈಕ್ರೋ ಸ್ಯಾಟಲೈಟ್‌ಗೆ ಹೊಂದಿಕೆಯಾಗುವ ಕೆಲವು ರಚನೆ, ಭವಿಷ್ಯದ ಕಾರ್ಯಾಚರಣೆ ಉಪಗ್ರಹಗಳಿಗೆ ಅಗತ್ಯವಿರುವ ಹೊಸ ತಂತ್ರಜ್ಞಾನಗಳ ಸಂಯೋಜನೆಗೆ ಸಹಕಾರಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹ ಉಡಾವಣೆಯಾಗಲಿದೆ. ಇದು ಮೂರು ಪೆಲೋಡ್ ಗಳನ್ನು ಹೊಂದಿದ್ದು, 400 ಜಿಬಿ ಡೇಟಾ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.