ಆ.31 ರೊಳಗೆ ರೇಷನ್ ಕಾರ್ಡ್ ‘ಇ-ಕೆವೈಸಿ’ ಮಾಡಿಸುವುದು ಕಡ್ಡಾಯ.! ಇಲ್ಲವಾದಲ್ಲಿ ರೇಷನ್ ಬಂದ್

WhatsApp
Telegram
Facebook
Twitter
LinkedIn

ಪಡಿತರ ಚೀಟಿದಾರರು  ಆಗಸ್ಟ್ 31ರೊಳಗೆ ನಿಮ್ಮ ಕುಟುಂಬದ ಎಲ್ಲ ಸದಸ್ಯರ ‘ಈ-ಕೆವೈಸಿ’  ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ಈ ನಿಯಮವನ್ನು ಸಂಪೂರ್ಣವಾಗಿ ಪಾಲಿಸಲು ರಾಜ್ಯ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದು, ‘ಈ-ಕೆವೈಸಿ’ ಪೂರ್ಣಗೊಳ್ಳದ ಪಡಿತರ ಚೀಟಿದಾರರಿಗೆ ಮುಂದಿನ ದಿನಗಳಲ್ಲಿ ಪಡಿತರ ಹಂಚಿಕೆ ಸ್ಥಗಿತಗೊಳ್ಳಲಿದೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಅವಿನ್ ಆರ್. ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ಪಡಿತರ ಚೀಟಿದಾರರು ತಮ್ಮ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಹೋಗಿ, ಬೆಳಿಗ್ಗೆ 7.00 ಗಂಟೆಯಿಂದ ರಾತ್ರಿಯ 9.00 ಗಂಟೆಯೊಳಗೆ ಈ-ಕೆವೈಸಿ ಪ್ರಕ್ರಿಯೆಯನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು.

ಈ-ಕೆವೈಸಿ ಪ್ರಕ್ರಿಯೆ ಏಕೆ ಕಡ್ಡಾಯವಾಗಿದೆ?

ಈ-ಕೆವೈಸಿ ಪ್ರಕ್ರಿಯೆ ಮೂಲಕ ಪಡಿತರ ಚೀಟಿದಾರರ ಬಗ್ಗೆ ಸರಿಯಾದ ಮಾಹಿತಿ ಪಡೆಯುವುದು ಹಾಗೂ ಹಗರಣಗಳನ್ನು ತಡೆಯುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಈಗಿನ ಪಡಿತರ ವ್ಯವಸ್ಥೆಯಲ್ಲಿ ಕೆಲವರು ಅನಧಿಕೃತವಾಗಿ ಪಡಿತರ ಪಡೆಯುತ್ತಿರುವುದು ಕಂಡುಬಂದಿದೆ.  ಇಂತಹ ದುರ್ಪಯೋಗವನ್ನು ತಪ್ಪಿಸುವುದು ಹಾಗೂ ಸರಿಯಾದ ಅರ್ಹರು ಮಾತ್ರ ಪಡಿತರ ಪಡೆಯಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಪಡ್ಡಿತರ ಸ್ಥಗಿತ:

ಆಗಸ್ಟ .31 ರೊಳಗೆ ಈ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಚೀಟಿದಾರರು ತಮ್ಮ ಪಡಿತರ ಹಂಚಿಕೆಯನ್ನು ಮುಂದಿನ ತಿಂಗಳುಗಳಿಂದ ಪಡೆಯಲು ಸಾಧ್ಯವಿರುವುದಿಲ್ಲ. ಇದು ಸಾಮಾನ್ಯ ಜನರ ಮೇಲೆ ತೀವ್ರ ಪರಿಣಾಮ ಬೀರಬಹುದಾದ್ದರಿಂದ, ಈ ಸಮಯಾವಕಾಶವನ್ನು ದುಡಿಸಿಕೊಳ್ಳುವಂತೆ ಅವಿನ್ ಆರ್. ಅವರು ಸೂಚಿಸಿದ್ದಾರೆ. ಇದು ಪಡಿತರ ವ್ಯವಸ್ಥೆಯ ಸುಧಾರಣೆಗಾಗಿ ಸರ್ಕಾರದ ಮಹತ್ವದ ಹೆಜ್ಜೆಯಾಗಿದ್ದು, ಎಲ್ಲರಿಗೂ ಅನುಕೂಲವಾಗಲು ಮತ್ತು ಯಾವುದೇ ತೊಂದರೆ ಉಂಟಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

BC Suddi   About Us
For Feedback - [email protected]

Related News

LATEST Post

WhatsApp Icon Telegram Icon