ಪುಣೆ: ವಿಮಾನದಲ್ಲಿ ಪ್ರಯಾಣಿಸುವಾಗ ತಮ್ಮ ಲಗೇಜ್ ಕಾಣೆಯಾಗಿದೆ ಎಂದು ಪ್ರ್ ಅಯಾಣಿಅಕ್ರು ದೂರುವುದು ಹೆಚ್ಚಾಗಿ ಕೇಳಿರುತ್ತೇವೆ. ಆದರೆ ನಾಗ್ಪುರ ನಿವಾಸಿ ಸಾಗರಿಕಾ ಪಟ್ನಾಯಕ್ ಅವರು ವಿಮಾನದಲ್ಲಿ ಪ್ರಯಾಣಿಸುವಾಗ ಸೀಟು ಕಾಣೆಯಾಗಿದೆ ಎಂದು ಆರೋಪಿಸಿದ್ದಾರೆ.
ಸಾಗರಿಕಾ ಭಾನುವಾರ ಬೆಳಗ್ಗೆ ಪುಣೆಯಿಂದ ನಾಗ್ಪುರಕ್ಕೆ (6E-6798) ಇಂಡಿಗೋ ವಿಮಾನದಲ್ಲಿ ಕೆಲಸದ ನಿಮಿತ್ತ ಪ್ರಯಾಣಿಸುತ್ತಿದ್ದರು . ಪಟ್ನಾಯಕ್ ಅವರಿಗೆ ವಿಂಡೋ ಸೀಟ್, ಸಂಖ್ಯೆ 10A ಅನ್ನು ನಿಗದಿಪಡಿಸಲಾಗಿತ್ತು. ಆದರೆ ವಿಮಾನ ಹತ್ತಿ ನಿಗದಿಪಡಿಸಿದ ಸೀಟ್ ಬಳಿ ಬಂದಾಗ ಸೀಟ್ ಕುಶನ್ ಕಾಣೆಯಾಗಿತ್ತು.
ಈ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. “ಕ್ಯಾಬಿನ್ ಸಿಬ್ಬಂದಿಯೊಬ್ಬರೊಂದಿಗೆ ಈ ಬಗ್ಗೆ ಪ್ರಶ್ನಿಸಿದಾಗ ಸೀಟಿನ ಕೆಳಗೆ ಕುಶನ್ ಇರಬಹುದು ನೋಡಿ ಎಂದುತ್ತರಿಸಿದ್ದಾರೆ. ಆದರೆ ಸಾಗರಿಕಾ ಅವರಿಗೆ ಕುಶನ್ ಸಿಗದೆ ಇದ್ದಾಗ ಅಂತಿಮವಾಗಿ, ಸಿಬ್ಬಂದಿಯೊಬ್ಬರು ಯಾವುದೇ ಸೀಟಿನಿಂದ ಮತ್ತೊಂದು ಕುಶನ್ ತಂದು ಇರಿಸಿದರು ಸೀಟು ಕುಶನ್ ಹೇಗೆ ನಾಪತ್ತೆಯಾಗಿರಬಹುದು? ಇಂಡಿಗೋದಂತಹ ಏರ್‌ಲೈನ್ ಬ್ರಾಂಡ್‌ನಿಂದ ಇದನ್ನು ಖಂಡಿತವಾಗಿಯೂ ನಿರೀಕ್ಷಿಸಲಾಗುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.
ಸಾಗರಿಕಾ ಟ್ವೀಟ್ ಗೆ ” ಹಾಯ್, ಹೀಗೆ ನೋಡಲು ಚೆನ್ನಾಗಿರುವುದಿಲ್ಲ. ಕೆಲವೊಮ್ಮೆ, ಸೀಟ್ ಕುಶನ್ ಅದರ ವೆಲ್ಕ್ರೋದಿಂದ ಬಿಟ್ಟುಹೋಗುತ್ತದೆ. ಅದನ್ನು ನಮ್ಮ ಸಿಬ್ಬಂದಿಯ ಸಹಾಯದಿಂದ ಅಲ್ಲಿ ಇರಿಸಬಹುದು. ನಿಮ್ಮ ಪ್ರತಿಕ್ರಿಯೆಯನ್ನು ಪರಿಶೀಲನೆಗಾಗಿ ಸಂಬಂಧಪಟ್ಟ ತಂಡದೊಂದಿಗೆ ಹಂಚಿಕೊಳ್ಳಲಾಗುತ್ತದೆ. ಭವಿಷ್ಯದಲ್ಲಿ ನಿಮಗೆ ಉತ್ತಮವಾಗಿ ಸೇವೆ ಸಲ್ಲಿಸುತ್ತದೆ” ಎಂದು ಇಂಡಿಗೋ ಪ್ರತಿಕ್ರಿಯಿಸಿದೆ .