ನವದೆಹಲಿ: ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಬದಲಿಸಲಾಗುತ್ತದೆ ಎಂಬ ವದಂತಿಗಳು ಹಬ್ಬಿದ್ದು, ಸೆ.18 ರಿಂದ 5 ದಿನಗಳ ಕಾಲ ನಡೆಯುವ ಸಂಸತ್ತಿನ ವಿಶೇಷ ಧಿವೇಶನದಲ್ಲಿ ಇಂಥದೊಂದ್ದು ನಿರ್ಧಾರ ಕೈಗೊಳ್ಳಲಾಗುತ್ತಿದೆ. ದೇಶದ ಮರುನಾಮಕರಣ ಮಸೂದೆ ಮಂಡಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ ಎನ್ನುವ ಊಹಾಪೋಹಗಳು ಹರಡಿದ್ದು ಈ ಬಗ್ಗೆ ಬಾರಿ ಚರ್ಚೆ ಆಗುತ್ತಿದೆ.
ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಸರ್ಕರದಿಂದ ಹೊರಬಿದ್ದಿಲ್ಲವಾದರೂ , ಜಿ -20 ಶೃಂಗ ಸಭೆಗೆ ಆಗಮಿಸುತ್ತಿರುವ ವಿದೇಶಿ ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಹೋಗಿರುವ ಆಹ್ವಾನ ಪತ್ರದಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಂಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಿರುವುದು ಈ ಚರ್ಚೆಗೆ ಮತ್ತಷ್ಟು ಕಾವು ಕೊಟ್ಟಿದೆ.
ಈ ಎಲ್ಲದ ನಡುವೆ ಇಂಡಿಯಾ ಬದಲು ಭಾರತ ಹೆಸರು ಅಧಿಕೃತವಾದ ಮೇಲೆ ಹಲವು ಸಂಸ್ಥೆಗಳ ಹೆಸರು ಬದಲಾಗುತ್ತಾ ಅನ್ನುವ ಬಗ್ಗೆ ನೆಟ್ಟಿಗರು ಬಾರಿ ಚರ್ಚೆ ನಡೆಸುತ್ತಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸುಪ್ರೀಂ ಕೋರ್ಟ್ ಆಫ್ ಇಂಡಿಯಾ, ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಜೇಷನ್, ಹೆಸರುಗಳು ಏನಾಗಬಹುದು ಎಂಬ ಚರ್ಚೆ ನಡೆಯುತ್ತಿದೆ. ಇದರ ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್, ಮುಂಬೈ ಇಂಡಿಯನ್ಸ್, ಟೀಮ್ ಇಂಡಿಯಾದ ಹೆಸರು ಏನಾಗಬಹುದು ಎನ್ನುವ ಬಗ್ಗೆ ಕುತೂಹಲಕಾರಿ ಕಾಮೆಂಟ್ಗಳು ಕೂಡ ನೆಟ್ಟಿಗರು ಮಾಡುತ್ತಿದ್ದಾರೆ.