ನವದೆಹಲಿ: ಇಂಡಿಯಾ ಎಂಬ ಹೆಸರು ಪ್ರಧಾನಿ ಮೋದಿಗೆ ಭಯ ತಂದಿದೆ. ಇಂಡಿಯಾ ಎಂಬ ಮೈತ್ರಿಕೂಟ ರಚನೆಯಾದ ದಿನದಿಂದ ಪ್ರಧಾನಿ ಮೋದಿಯವರಿಗೆ ಇಂಡಿಯಾ ಎಂಬ ಹೆಸರಿನ ಮೇಲೆ ದ್ವೇಷ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಕಿಡಿಕಾರಿದ್ದಾರೆ.
ಹಿಂದೂ ಹೆಸರನ್ನು ನೀಡಿದವರು ವಿದೇಶಿಯರು ಎಂದು ಹೇಳಿದ ಅವರು,ಸದ್ಯ ರಾಷ್ಟ್ರಪತಿಗಳ ನಿವಾಸವಾಗಿರುವ ರಾಷ್ಟ್ರಪತಿ ಭವನ ಈ ಹಿಂದೆ ಬ್ರಿಟಿಷ್ ವೈಸ್‌ರಾಯ್ ಮನೆಯಾಗಿತ್ತು. ಮೋದಿಯವರು ಬ್ರಿಟಿಷರ ವಿರೋಧಿಯಾಗಿದ್ದರೆ ರಾಷ್ಟ್ರಪತಿ ಭವನವನ್ನು ಏನು ಮಾಡುತ್ತಾರೆ ಎಂದು ಅಧೀರ್ ರಂಜನ್ ಪ್ರಶ್ನೆ ಮಾಡಿದ್ದಾರೆ.
ಇಂಡಿಯಾ’ ಬದಲಿಗೆ `ರಿಪಬ್ಲಿಕ್ ಆಫ್ ಭಾರತ್’ ಎಂದು ಮರುನಾಮಕರಣ ಮಾಡುವ ಹೊಸ ನಿರ್ಣಯವನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ವಿಪಕ್ಷಗಳು ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ.