ನವದೆಹಲಿ: ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅಧಿವೇಶನದಲ್ಲಿ ಮಾತನಾಡುವ ವೇಳೆ ಭಾವುಕರಾಗಿದ್ದಾರೆ. ‘ಇಂಥ ವಾತಾವರಣದಲ್ಲಿ ನಾನು ಹೆಚ್ಚು ಕಾಲ ಬದುಕಲು ಇಚ್ಛಿಸುವುದಿಲ್ಲ’ ಎಂದು ಸ್ಪೀಕರ್ ಜಗದೀಪ್ ಧನಕರ್ ಅವರಿಗೆ ಉತ್ತರಿಸಿದ್ದಾರೆ. ಸಂಸದ ಘನಶ್ಯಾಮ ತಿವಾರಿ ಅವರ ಟೀಕೆಗೆ ಉತ್ತರಿಸುವ ವೇಳೆ ಖರ್ಗೆ ಅವರು ಈ ಮಾತುಗಳನ್ನು ಹೇಳಿದ್ದಾರೆ. ನನ್ನ ತಂದೆ – ತಾಯಿ ಬಹಳ ಯೋಚನೆ ಮಾಡಿ ನನಗೆ ಮಲ್ಲಿಕಾರ್ಜುನ್ ಎಂದು ಹೆಸರಿಟ್ಟಿದ್ದಾರೆ. ಮಲ್ಲಿಕಾರ್ಜುನ್ ಎಂದರೆ ಶಿವನ ಇನ್ನೊಂದು ಹೆಸರು. 12 ಜ್ಯೋತಿರ್ಲಿಂಗಗಳಲ್ಲಿ ಮಲ್ಲಿಕಾರ್ಜುನ ಕೂಡ ಒಬ್ಬ. ನನ್ನ ತಂದೆ 85ನೇ ವಯಸ್ಸಿನಲ್ಲಿ ನಿಧನರಾದರು. ನಾನು ಭಾರತದ ಮೊದಲ ಪೀಳಿಗೆಯ ರಾಜಕಾರಣಿ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಜಗದೀಪ್ ಧನಕರ್ ನೀವು 85 ಅಲ್ಲ ಬದಲಾಗಿ 95 ಆದರೂ ಬದುಕಿರಬೇಕು ಎಂದರು. ಇದಕ್ಕೆ ಪ್ರತಿಕ್ರಯಿಸಿದ ಖರ್ಗೆ ‘ಇಂಥ ವಾತಾವರಣದಲ್ಲಿ ನಾನು ಹೆಚ್ಚು ಕಾಲ ಬದುಕಲು ಇಚ್ಛಿಸುವುದಿಲ್ಲ ಎಂದರು.