ದಾವಣಗೆರೆ : ದಸರಾ-ನವರಾತ್ರಿ ಪ್ರಯುಕ್ತ ನಗರದ ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ಅ.3 ರಿಂದ ಅ 12ರ ಶನಿವಾರದವರೆಗೆ ಶ್ರೀ ಅಮ್ಮನವರಿಗೆ ವೇದೋಕ್ತ ಪಂಚಾಮೃತಾಭಿಷೇಕ, ಅಲಂಕಾರ ಮತ್ತು ದುರ್ಗಾಹೋಮಗಳು ನಡೆಯಲಿವೆ.
ಅ.3ರ ಗುರುವಾರ ಪ್ರಾತಃಕಾಲ ಗಣಪತಿ ಪೂಜೆ, ಪುಣ್ಯಾಹ ವಾಚನ ಘಟಸ್ಥಾಪನೆ ಮತ್ತು ಧ್ವಜಾರೋಹಣ ನಡೆಯುವುದು.
ಅ.11ರ ಶುಕ್ರವಾರದಂದು ದುರ್ಗಾಷ್ಟಮಿ ಮತ್ತು ಆಯುಧ ಪೂಜೆ ನಡೆಯಲಿದೆ.
ಅ.12ರ ಶನಿವಾರದಂದು ವಿಜಯದಶಮಿ ಹಾಗೂ ಸಂಜೆ 6-30ಕ್ಕೆ ಪಾಲಕಿ ಉತ್ಸವದೊಂದಿಗೆ ಬನ್ನಿಮುಡಿಯುವುದು ನಂತರ ಪ್ರಸಾದ ವಿನಿಯೋಗ ಇರುತ್ತದೆ.
ನವರಾತ್ರಿಯ ಪ್ರಯುಕ್ತ ಪ್ರತಿದಿನ ಸಂಜೆ 6 ರಿಂದ 7 ರವರೆಗೆ ಶ್ರೀ ಕಾಳಿಕಾದೇವಿ ಮಹಿಳಾ ಭಜನಾ ಮಂಡಳಿಯಿಂದ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ಮತ್ತು ಸಂಜೆ 7 ರಿಂದ 9 ರವರೆಗೆ ಟಿ. ಪರಮೇಶ್ವರಚಾರ್ ಮತ್ತು ಎನ್. ರಮೇಶಚಾರ್ ಅವರಿಂದ ಶ್ರೀ ದೇವಿಯ ಪಾರಾಯಣ ನಡೆಯಲಿದೆ ಎಂದು ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನ ಆಡಳಿತ ಸಮಿತಿ ಟ್ರಸ್ಟ್‌ನ ಪರವಾಗಿ ಕಾರ್ಯದರ್ಶಿ, ಸಹ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಸೂಚನೆ : ದಸರಾ ಮಹೋತ್ಸವದ ಅಂಗವಾಗಿ ಶ್ರೀದೇವಿಗೆ ಪಂಚಾಮೃತಾಭಿಷೇಕ ಮತ್ತು ಪೂಜಾ ಸೇವೆಗೆ ರೂ. 151/-, ಪ್ರತಿ ಕುಟುಂಬದಿಂದ ಉತ್ಸವ ಮೂರ್ತಿಯ ಅಭಿಷೇಕ ಸೇವೆಗೆ ರೂ. 251/-, ಶ್ರೀ ದುರ್ಗಾಹೋಮದ ಸೇವೆಗೆ ರೂ. 501/-, ಅಭಿಷೇಕ+ವಿಶೇಷ ಅಲಂಕಾರ ಸೇವೆಗೆ ರೂ. 1001/- ಹಾಗೂ ಶ್ರೀ ದುರ್ಗಾಹೋಮ+ಅಭಿಷೇಕ+ವಿಶೇಷ ಅಲಂಕಾರ ಸೇವೆಗೆ ರೂ. 1501/-ಗಳನ್ನು ನಿಗದಿಪಡಿಸಲಾಗಿದ್ದು, ದುರ್ಗಾಷ್ಟಮಿ ದಿನದಂದು ದುರ್ಗಾಹೋಮವನ್ನು ಏರ್ಪಡಿಸಲಾಗಿರುತ್ತದೆ. ಸರ್ವ ಭಕ್ತಾಧಿಗಳು ಅಧಿಕೃತ ರಸೀದಿಯನ್ನು ಪಡೆದು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.