ಇಂದಿನಿಂದ ಗಾಜಿನ ಮನೆಯಲ್ಲಿ ನ.13 ರಿಂದ 16 ರವರೆಗೆ ಫಲಪುಪ್ಪ ಪ್ರದರ್ಶನ.!

WhatsApp
Telegram
Facebook
Twitter
LinkedIn

 

ದಾವಣಗೆರೆ: ನಗರದ ಕುಂದುವಾಡ ಕೆರೆ ಬಳಿಯಿರುವ ಗಾಜಿನ ಮನೆಯಲ್ಲಿ ನ.13 ರಿಂದ 16 ರವರೆಗೆ ಫಲ ಪುಷ್ಪ ಪ್ರದರ್ಶನ ನಡೆಯಲಿದ್ದು, ಇದರಲ್ಲಿ ಚಂದ್ರಯನ-3 ಆನಾವರಣಗೊಳಲಿದೆ ಎಂದು  ತೋಟಗಾರಿಕೆ ಉಪನಿರ್ದೇಶಕ ಜಿ.ಸಿ ರಾಘವೇಂದ್ರ ಪ್ರಸಾದ್ ತಿಳಿಸಿದರು

ಭಾನುವಾರ ಗಾಜಿನಮನೆಯ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತಾನಾಡಿ ಫಲಪುಷ್ಪ ಪ್ರದರ್ಶನ -2023ವನ್ನು ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ದಾವಣಗೆರೆ, ಜಿಲ್ಲಾ, ತೋಟಗಾರಿಕೆ ಸಂಘ ಮತ್ತು ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಫಲಪುಪ್ಪ ಪ್ರದರ್ಶನದಲ್ಲಿ  10 ಸಾವಿರ ನಾನಾ ಪ್ಲಾಂಟ್‍ಗಳ ಮತ್ತು ಲಕ್ಷಾಂತರ ಹೂವುಗಳಲ್ಲಿ ಅನೇಕ ಕಲಾಕೃತಿಗಳು ಅರಳಿವೆ. ಮತ್ತು ರೈತರು ಬೆಳೆದ ವಿವಿಧ ಹಣ್ಣುಗಳು, ತರಾಕಾರಿ ಪ್ರದರ್ಶನ ಇರಲಿವೆ.

3 ಲಕ್ಷ ಹೂವುಗಳಲ್ಲಿ ಚಂದ್ರಯಾನ: ಈ ಬಾರಿಯ ಫಲಪುಪ್ಪ ಪ್ರದರ್ಶನದಲ್ಲಿ ಮುಖ್ಯ ಆಕರ್ಚಣೆಯಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಭಿವೃದ್ದಿಪಡಿಸಿ 14 ಜುಲೈ 2023 ರಂದು ಉಡಾವಣೆ ಮಾಡಿದ ಚಂದ್ರಯಾನ-3 ಆನಾವರಣಗೊಳಲಿದೆ. ಇದರಲ್ಲಿ ಒಟ್ಟು 3 ಲಕ್ಷ ಹೂವುಗಳನ್ನು ಬಳಕೆ ಮಾಡಲಾದೆ. ಚಂದ್ರಯಾನ-3 ರ 25 ಅಡಿ ಎತ್ತರದ ಹಾಗೂ 11 ಅಡಿ ಅಗಲದ ಪಿಎಸ್‍ಎಲ್‍ವಿ ಪಾಪುಲೇಷನ್ ಮಾಡಲ್, 9 ಅಡಿ ಎತ್ತರದ ವಿಕ್ರಂ ಲ್ಯಾಂಡರ್ , ಪ್ರಗ್ನ್ಯಾನ್ ರೋವರ್‍ಗಳು ಹೂವಿನಿಂದ ಅಲಂಕರಿಸಲಾಗಿದೆ. ಇದಕ್ಕಾಗಿ  2 ಲಕ್ಷ ಸೇವಂತಿಗೆ, 50 ಸಾವಿರ ಕೆಂಪು ಗುಲಾಬಿ ಮತ್ತು 20 ಸಾವಿರ ಆರ್ಕಿಡ್ಸ್, ಕಾರ್ನೇಷನ್, ಅಂತೋರಿಯಮ್ಸ್, ಲಿಲ್ಲೀಸ್ ಮತ್ತು ಜಿಪ್ಸೋಪಿಲಾ ಸೇರಿ ಒಟ್ಟು 3 ಲಕ್ಷ ಹೂವುಗಳ ಬಳಕೆಯಾಗಲಿದೆ.

ಇದಲ್ಲದೆ 46 ಬಗೆಯ 15 ಸಾವಿರಕ್ಕೂ ಹೆಚ್ಚು ವಿವಿಧ ಅಲಂಕಾರಿಕ ಮತ್ತು ಹೂವಿನ ಗಿಡಗಳ ವಿವಿಧ ಕಲಾತ್ಮಕ ವಿನ್ಯಾಸದ ಜೋಡಣೆಯನ್ನು ಮಾಡಲಾಗಿದೆ. ಸಾಲ್ವಿಯಾ, ಪೆಟುನಿಯಾ, ಬೆಗೋನಿಯಾ, ಟೋರೆನಿಯಾ, ಜಿನಿಯಾ, ಸೇವಂತಿಗೆ, ಚೆಂಡು ಹೂವು, ಪೆಂಟಾಸ್, ಸೆಲೋಸಿಯಾ, ಡೇರೆ ಹೂವು, ಡಯಾಂಥಸ್, ಬಾಲ್ಸಮ್, ಸ್ಟ್ರೋ ಬಿಲಾಂಥಸ್, ಗೆಜೆನಿಯಾ, ಟೆಕೋಮಾ, ಅಡೇನಿಯಮ್, ಸೇಡಮ್, ಕೋಲಿಯಸ್, ವರ್ಬೆನಾ, ಕೆಂಪು ಕೋಲಿಯಸ್, ಪೆಡಿಲಾಂತಸ್, ಅಕಲಿಫಾ, ಕ್ರೋ ಟನ್, ಡ್ರೆಸಿನಾ ವೇರಿಗೆಟ, ಫೈಕಸ್ ಸ್ನೇಕ್‍ಪ್ಲಾಂಟ್, ಅಗ್ಲೋನೆಮಾ, ನೆಫೆÇ್ರೀಲೆಪಿಸ್ ಫರ್ನ್, ಸ್ಕಫ್ಲೇರಿಯಾ, ಡ್ರೆಸಿನಾ ರಿಫ್ಲೇಕ್ಸ್, ಕೆಂಪು ಡ್ರೆಸಿನಾ, ಕ್ಯಾಕ್ಟಸ್, ಅಗ್ಲೊನಿಮಾ, ರಿಬ್ಬನ್ ಗ್ರಾಸ್, ಅರೆಕಾ ಪಾಮ್, ಬೌಗೆನ್ವಿಲ್ಲೆ ಕಾಗದ ಹೂವು, ಟೇಬಲ್ ಪಾಮ್ ಮತ್ತು ಸಾಗೊ ಪಾಮ್‍ಗಳನ್ನು ಬಳಸಲಾಗಿದೆ.

ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ’ನಮ್ಮ ಕರ್ನಾಟಕ’ ರಾಜ್ಯದ ಭೂಪಟವನ್ನು ಹೂವುಗಳಿಂದ ಅಲಂಕರಿಸಲಾಗುವುದು. ದಾವಣಗೆರೆಯ ದೃಶ್ಯ ಕಲಾ ಮಹಾವಿದ್ಯಾಲಯದವರಿಂದ ರಾಜ್ಯೊತ್ಸವದ ವಿಷಯ ಕೇಂದ್ರಿಕರಿಸಿ ನಾನಾ ಚಿತ್ರಕಲೆ, ಶಿಲ್ಪಕಲಾಕೃತಿಗಳು ಮತ್ತು ಕೆತ್ತನೆಗಳು ಪ್ರದರ್ಶನದಲ್ಲಿ ಇರಲಿವೆ. 16 ಅಡಿ ಎತ್ತರದ ಹಾಗೂ 10 ಅಡಿ ಅಗಲದ ಶಿವನಂದಿಯ ಕಲಾಕೃತಿಯ ರಚನೆ ಮಾಡಲಾಗಿದೆ.

ಫಲಪುಷ್ಪ ಪ್ರದರ್ಶನದ ಅಂಗವಾಗಿ ಪ್ರತಿಭಾನ್ವಿತ ಕಲಾವಿದರಿಂದ ಡೊಳ್ಳು ಕುಣಿತ, ನಾದಸ್ವರ ಮತ್ತು ಸುಗಮಸಂಗೀತ, ಅನುಶ್ರೀ ಸಂಗೀತ ಶಾಲೆಯ ಮಕ್ಕಳ ನಾಡುನುಡಿ ಗಾಯನಕ್ಕೆ ಕಲಾವಿದರು ಸ್ಥಳದಲ್ಲಿಯೇ ವರ್ಣರಂಜಿತ ಚಿತ್ರ ರಚನೆ ಮತ್ತು ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ.

ಗಾಜಿನ ಮನೆಯ ಉದ್ಯಾನವನದ ಆವರಣದಲ್ಲಿ ಅಪರೂಪದ ಅಲಂಕಾರಿಕ ಮರಗಳನ್ನು ನಾಟಿ ಮಾಡಿರುವುದು ತಮಗೆ ತಿಳಿದ ವಿಷಯವಾಗಿರುತ್ತದೆ, ಈ ಎಲ್ಲಾ ಮರಗಳಿಗೆ ಮತ್ತು ಗಾಜಿನ ಮನೆಯ ಒಳಗಿನ ಭಾಗಗಳಿಗೆ ವಿವಿಧ ಬಣ್ಣಗಳ ವಿದ್ಯುತ್ ದೀಪಾಲಂಕಾರ ಮಾಡಿ ಕಾರ್ಯಕ್ರಮ ಸೊಬಗನ್ನು ಇಮ್ಮಡಿಗೊಳಿಸಲಾಗಿದೆ. ಇದಲ್ಲದೇ ಮಕ್ಕಳಿಗೆ ವಿವಿಧ ಆಟಗಳ ಜೊತೆಗೆ ವಿಶೇಷ ತಿಂಡಿ ತಿನಿಸುಗಳ ಮಳಿಗೆಗಳನ್ನೂ ಸಹಾ ನಿರ್ಮಿಸಲಾಗಿದೆ.

7 ಅಡಿ ಎತ್ತರದ ಭಾರತ ಭೂಪಟದ ವಿನ್ಯಾಸ, 8 ಅಡಿ ಎತ್ತರದ Iಅಅ Woಡಿಟಜ ಅuಠಿ ಹೂವಿನ ಕಲಾಕೃತಿಯನ್ನು ಮತ್ತು 10 ಅಡಿ ಎತ್ತರದ ಅoಜಿಜಿee ಅuಠಿ ನ್ನು 5 ಸಾವಿರಕ್ಕೂ ಹೆಚ್ಚು ವಿವಿಧ ಬಣ್ಣದ ಸೇವಂತಿಗೆ ಹೂವುಗಳು ಮತ್ತು 2 ಸಾವಿರ ಗುಲಾಬಿ ಹೂವುಗಳಿಂದ ನಿರ್ಮಾಣ ಮಾಡಲಾಗಿದೆ.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತೋಟಗಾರಿಕೆ ಬೆಳೆಗಾರರು ಬೆಳೆದ ವಿವಿಧ ತೋಟಗಾರಿಕೆ ಬೆಳೆಗಳಾದ ಹಣ್ಣು, ತರಕಾರಿ, ಸಾಂಬಾರು ಮತ್ತು ತೋಟದ ಬೆಳೆಗಳ ಉತ್ಪನ್ನಗಳನ್ನು ಪ್ರದರ್ಶಿಸಲಾಗಿದೆ. ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಬರುವ ಸಾರ್ವಜನಿಕರಿಗೆ ದಿನಾಂಕ:13-11-2023 ರಿಂದ 16-11-2023 ರ ವರೆಗೆ ಪ್ರತಿ ದಿನ ಸಾಯಂಕಾಲ ಸಂಗೀತ ಕಾರಂಜಿಯ ಪ್ರದರ್ಶಗಳನ್ನು ಇರುತ್ತದೆ.

ಸಾರ್ವಜನಿಕ ಪ್ರವೇಶ ಶುಲ್ಕವು ಪ್ರತಿ ದಿನದ ಸಂಗೀತ ಕಾರಂಜಿಯ ಪ್ರದರ್ಶನವಿರುವುದರಿಂದ ವಯಸ್ಕರಿಗೆ ರೂ. 30/- ಮತ್ತು ಮಕ್ಕಳಿಗೆ ರೂ. 10/- ನಿಗದಿಪಡಿಸಲಾಗಿದೆ. ದಿನಾಂಕ: 16-11-2023 ರ ವರೆಗೆ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಸಾರ್ವಜನಿಕರು ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 9 ವರೆಗೆ ವೀಕ್ಷಿಸಬಹುದಾಗಿದೆ. ಎಂದು ತಿಳಿಸಿದ್ದಾರೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon