ಇಂದಿನಿಂದ ಮೂರು ದಿನ ಈ ಏರಿಯಾಗಳಲ್ಲಿ ಕರಂಟ್ ಇರಲ್ಲ

 

ಬೆಂಗಳೂರು: ನಗರದಲ್ಲಿ ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವ ಕಾರಣ ಇಂದಿನಿಂದ ಭಾನುವಾರದವರೆಗೆ ಅಂದರೆ ಅಕ್ಟೋಬರ್.23ರವರೆಗೆ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಈ ಬಗ್ಗೆ ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು,  ಬೆಂಗಳೂರು: “66/11ಕೆ.ವಿ ಟೆಲಿಕಾಂ” ಸ್ಟೇಷನ್ ನಲ್ಲಿ 11ಕೆ,ವಿ ಬ್ಯಾಂಕ್-2 ನ ಬ್ರೇಕರಗಳನ್ನು ಬದಲಿಸುವ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಇಂದಿನಿಂದ 23.10.2024 ರವರೆಗೆ ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು ಎಂದಿದೆ.

Advertisement

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: “ಓಬಳೇಶ್ ಕಾಲೋನಿ, ರ‍್ಸಸ್ ಗರ‍್ಡನ್, ರಾಯಪುರ, ಬಿನ್ನಿ ಪೇಟ್, ಪಾದರಾಯನಪುರ, ಜೆಜೆಆರ್ ನಗರ, ಗೋಪಾಲನ್ ಮಾಲ್, ಮೈಸೂರು ರಸ್ತೆ 1ನೇ, 2ನೇ, 3ನೇ ಕ್ರಾಸ್, ಮೋಮಿಂಪುರ, ಜಂಥಾ ಕಾಲೋನಿ, ಶಾಮನಾ ಗರ‍್ಡನ್, ರ‍್ಫತ್ ನಗರ, ರಂಗನಾಥ್ ಕಾಲೋನಿ, ಹೊಸಹಳ್ಳಿ ಮುಖ್ಯರಸ್ತೆ, ಪರ‍್ಕ್ ನಾವು ಬಿನ್ನಿ ಪೇಟೆ, ಅಂಜನಪ್ಪ ಗರ‍್ಡನ್, ದೊರೆಸ್ವಾಮಿ ನಗರ ಪವರ್ ಕಟ್ ಆಗಲಿದೆ.

ಹೂವಿನ ಉದ್ಯಾನ, ಹೊಸ ಪೊಲೀಸ್ ಕ್ವಾಟ್ರಸ್, ಎಸ್‌ಡಿ ಮಠ, ಕಾಟನ್ ಪೆಟ್, ಅಕ್ಕಿಪೇಟೆ, ಬಾಲಾಜಿ ಕಾಂಪ್ಲೆಕ್ಸ್, ಮನರ‍್ತಿ ಪೆಟ್, ಸುಲ್ತಾನ್ ಪೆಟ್, ನಲ್ಬಂಡ್‌ವಾಡಿ ಎದುರು ಚಿಕ್ಕಪೇಟೆ ಮೆಟ್ರೋ ಸ್ಟೇಷನ್, ಪೊಲೀಸ್ ರಸ್ತೆ, ಗೋಪಾಲನ್ ಅಪರ‍್ಟ್‌ಮೆಂಟ್, ಮರಿಯಪ್ಪ ಎ. ಕೆಪಿಎಸ್ ಮಠ, ಗಂಗಪ್ಪ ಗರ‍್ಡನ್, ಭುವನೇಶ್ವರಿ ನಗರ, ಪ್ರೆಸ್ಟೀಜ್ ವುಡ್ಸ್ ಅಪರ‍್ಟ್‌ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement