ಬೆಂಗಳೂರು: ಸರ್ಕಾರದ ಧೋರಣೆ ಖಂಡಿಸಿ ಇಂದಿನಿಂದ ನ್ಯಾಯಬೆಲೆ ಅಂಗಡಿಗಳನ್ನು ಮುಚ್ಚಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯದಡಿ 10 ಕೆ.ಜಿ ಅಕ್ಕಿ ವಿತರಿಸಲು ಅಕ್ಕಿ ಸಿಗದಿರುವ ಕಾರಣ, ಸರ್ಕಾರ ಜನರಿಗೆ 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಗೆ ಹಣವನ್ನ ಖಾತೆಗೆ ಹಾಕುವುದಾಗಿ ಘೋಷಣೆ ಮಾಡಿದ್ದು, ಇದರಿಂದ ನ್ಯಾಯಬೆಲೆ ವರ್ತಕರು ಅಸಮಾಧಾನಗೊಂಡು ಬಂದ್‌ಗೆ ಮುಂದಾಗಿದ್ದಾರೆ.
ರಾಜ್ಯದ ಒಟ್ಟು 20 ಸಾವಿರಕ್ಕೂ ಅಧಿಕ ಪಡಿತರ ವಿತರಕರು ಇಂದಿನಿಂದ ನ್ಯಾಯಬೆಲೆ ಅಂಗಡಿಗಳನ್ನು ಬಂದ್ ಮಾಡಿ ರೇಷನ್ ವಿಲೇವಾರಿ ಮಾಡದಿರಲು ನಿರ್ಧಾರ ಮಾಡಿದ್ದಾರೆ. ಸರ್ಕಾರ ನಮ್ಮನ್ನು ಕರೆದು ಚರ್ಚೆ ಮಾಡಬೇಕು, ಖಾತೆಗೆ ಹಣ ಹಾಕುವ ಬದಲು 10 ಕೆ.ಜಿ. ಬೇರೆ ದವಸಗಳನ್ನು ನೀಡಿ, ಇಲ್ಲವೇ ಖಾತೆಗೆ ಹಣವನ್ನೇ ಹಾಕುವುದಾದರೆ ನಮಗೆ 10 ಕೆ.ಜಿ. ಅಕ್ಕಿಯ ಕಮಿಷನ್ ನೀಡಿ ಎನ್ನುವ ಪಟ್ಟು ಹಿಡಿದಿದ್ದಾರೆ. ಜನರಿಗೆ 5 ಕೆ.ಜಿಗೆ ಹಣ ನೀಡಿದರೆ, ನಮಗೆ ನಷ್ಟ ಆಗುತ್ತದೆ, ನಾವೇ 10 ಕೆಜಿ ಅಕ್ಕಿ ನೀಡಿದರೆ ನಮಗೆ ಕಮಿಷನ್ ಹೆಚ್ಚಾಗಿ ಸಿಗುತ್ತೆ ಎಂದು ವೋಟ್ ಹಾಕಿದ್ವಿ. ಈಗ 5 ಕೆಜಿ ಅಕ್ಕಿ ನೀಡಿದರೆ ಕಮಿಷನ್ ನಷ್ಟ ಆಗುತ್ತದೆ. ಇದನ್ನೇ ನಂಬಿಕೊಂಡಿರುವ ನಾವು ಹೇಗೆ ಜೀವನ ಮಾಡುವುದು ಎಂದು ನ್ಯಾಯಬೆಲೆ ವರ್ತಕರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.