ಸ್ಯಾಂಡಲ್ವುಡ್ನಲ್ಲಿ ಒಬ್ಬರ ಬಳಿಕ ಒಬ್ಬರ ವಿಚ್ಛೇದನ ಪ್ರಕರಣ ಚರ್ಚೆಗೆ ಗ್ರಾಸವಾಗುತ್ತಿದೆ. ಚಂದನ್ ಶೆಟ್ಟಿ & ನಿವೇದಿತಾ ಗೌಡ ಕಳೆದ ವಾರವಷ್ಟೇ ತಮ್ಮ ವಿಚ್ಛೇದನವನ್ನು ಘೋಷಿಸಿಕೊಂಡಿದ್ದರು.
ಆ ಬಳಿಕ ಯುವ ಹಾಗೂ ಶ್ರೀದೇವಿ ಸಂಸಾರದಲ್ಲಿ ಬಿರುಕು ಮೂಡಿದ್ದು, ಡಿವೋರ್ಸ್ ಹಂತ ತಲುಪಿದೆ. ಹೀಗಿರುವಾಗ, ನಟ ದುನಿಯಾ ವಿಜಯ್ ಹಾಗೂ ನಾಗರತ್ನ ದಂಪತಿ ವಿಚ್ಛೇದನ ಪ್ರಕರಣ ಈಗ ತಾರ್ಕಿಕ ಅಂತ್ಯ ಕಾಣುವ ಹಂತ ತಲುಪಿದೆ.
ಇಂದು ಈ ಪ್ರಕರಣದಲ್ಲಿ ತೀರ್ಪು ಹೊರಬರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. 2018ರಲ್ಲಿ ವಿಜಯ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.