ಬೆಂಗಳೂರು: ಕೊಲೆ ಆರೋಪದಲ್ಲಿ ಅರೆಸ್ಟ್ ಆಗಿರೋ ಪವಿತ್ರಾಗೌಡ ಮನೆಯಲ್ಲಿ ಇಂದು ಪೊಲೀಸ್ರು ಮಹಜರ್ ನಡೆಸಲಿದ್ದಾರೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ ನಂತರ ಪವಿತ್ರಾಗೌಡ ನೇರವಾಗಿ ತಮ್ಮ ಮನೆಗೆ ಹೋಗಿದ್ದರು. ಅಷ್ಟೇ ಅಲ್ಲದೆ ರೇಣುಕಾಸ್ವಾಮಿ ಮೇಲೆ ಮೊದಲು ಹಲ್ಲೆ ನಡೆಸಿದ್ದೇ ಪವಿತ್ರಾ ಗೌಡ. ಪವಿತ್ರಾಗೌಡ ನೋಡ್ತಿದ್ದಂತೆ ರೇಣುಕಾಸ್ವಾಮಿ ಆಕೆಯ ಕಾಲಿಗೆ ಬಿದ್ದು ತಪ್ಪಾಯ್ತು ಅಂತ ಕ್ಷಮೆ ಕೇಳಿದ್ದ. ಈ ವೇಳೆ ಪವಿತ್ರಾ ತಾನು ಹಾಕಿದ್ದ ಚಪ್ಪಲಿ ತೆಗೆದು ರೇಣುಕಾಸ್ವಾಮಿ ಮೇಲೆ ಪಟಪಟ ಅಂತ ಹಲ್ಲೆ ನಡೆಸಿ ತನ್ನ ಕೋಪ ತೀರಿಸಿಕೊಂಡಿದ್ದಳು. ಸದ್ಯ ಪವಿತ್ರಾ ಮನೆಯಲ್ಲಿ ಪೊಲೀಸ್ರು ಆ ದಿನ ಪವಿತ್ರಾ ಧರಿಸಿದ್ದ ಬಟ್ಟೆಯ ಹಾಗೂ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದ ಚಪ್ಪಲಿಯನ್ನು ಸೀಜ್ ಮಾಡಲಿದ್ದಾರೆ. ಪ್ರಕರಣದಲ್ಲಿ ಪವಿತ್ರಾ ಚಪ್ಪಲಿ ಕೂಡ ಮಹತ್ವದ ಸಾಕ್ಷ್ಯವಾಗಲಿದೆ.
