ಹಿಂದೂ ಸಂಪ್ರದಾಯದ ಪ್ರಕಾರ ಆಷಾಢ ಮಾಸದ ಕೊನೆಯ ದಿನವನ್ನು ಅಥವಾ ಆಷಾಡ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದು
ಆಚರಿಸಲಾಗುತ್ತದೆ.
ಈ ದಿನದಂದು ಹೆಣ್ಣು ಮಕ್ಕಳು ಒಂದು ದಿನ ಉಪವಾಸವಿದ್ದು ತಮ್ಮ ಪತಿ ಹಾಗೂ ಸಹೋದರರ ಆರೋಗ್ಯ ಮತ್ತು ಆಯತಷ್ಯಕ್ಕಾಗಿ
ಪ್ರಾರ್ಥಿಸುತ್ತಾರೆ. ಭೀಮನ ಅಮಾವಾಸ್ಯೆ ದಿನದಂದು ಭಗವಾನ್ ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುವ ಸಂಪ್ರದಾಯವಿದೆ.
ವಿವಾಹಿತ ಮಹಿಳೆ ತನ್ನ ಪತಿಯ ಪಾದಪೂಜೆ ನಡೆಸಿ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು. ಪೂಜೆ ಶುಭ ಮುಹೂರ್ತ ಇಂದು ಮುಂಜಾನೆ 6:15 ರಿಂದ ಮಧ್ಯಾಹ್ನ 12:42 ರವರೆಗೆ ಇರುತ್ತದೆ.