ಚಿತ್ರದುರ್ಗ: ಚಿತ್ರದುರ್ಗ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಸ್ಟ್ 23 ಮತ್ತು 24ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಚಿತ್ರದುರ್ಗ 220 ಕೆ.ವಿ ಸ್ವೀಕರಣಾ ಕೇಂದ್ರದಿಂದ ಸರಬರಾಜಾಗುವ ಎಫ್-01 ಕಾಪರ್ ಮೈನ್ಸ್ 11 ಕೆ.ವಿ ಮಾರ್ಗ, ಐ.ಪಿ. ಸೆಟ್ ಮಾರ್ಗ ಹಾಗೂ ನಿರಂತರ ಜ್ಯೋತಿ ಮಾರ್ಗಗಳು, ಕುಂಚಿಗನಾಳ್, ಇಂಗಳದಾಳ್, ಕುರುಮರಡಿಕೆರೆ, ಕೆನ್ನೆಹಡಲು, ದೊಡ್ಡಸಿದ್ದವ್ವನಹಳ್ಳಿ, ಕ್ಯಾದಿಗೆರೆ ಮತ್ತು ಕಸವನಹಳ್ಳಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ವಿದ್ಯುತ್ ಸರಬರಾಜು ಇರುವುದಿಲ್ಲ.
ಗ್ರಾಹಕರು ಸಹಕರಿಸಬೇಕು ಎಂದು ಚಿತ್ರದುರ್ಗ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.