ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಹಂಚಿಕೊಂಡ ಬೆಳ್ಳಿ ಪದಕವನ್ನು ಪಡೆಯುತ್ತಾರೆಯೇ ಎಂಬ ನಿರ್ಧಾರವನ್ನು ಶನಿವಾರ ರಾತ್ರಿ 9.30ಕ್ಕೆ ಪ್ರಕಟಿಸಲಾಗುವುದು ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ತಿಳಿಸಿದೆ. ಅಧಿಕ ತೂಕದ ಕಾರಣಕ್ಕಾಗಿ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದ ವಿನೇಶ್, “ನಾವು ಪದಕವನ್ನು ಕಳೆದುಕೊಂಡಿದ್ದೇವೆ, ಆದರೆ ಇದು ಆಟದ ಭಾಗವಾಗಿದೆ” ಎಂದು ಹೇಳಿದ್ದರು.
