ಇಂದು ವಿಶ್ವ ರೇಡಿಯೋ ದಿನಾಚರಣೆ

ಇಂದು ವಿಶ್ವ ರೇಡಿಯೋ ದಿನ. ಭಿನ್ನ ಸಂಸ್ಕೃತಿ ಮತ್ತು ಸಮುದಾಯಗಳ ಜನರನ್ನು ಬೆಸೆಯುವಲ್ಲಿ ಮಹತ್ವದ ಪಾತ್ರ ವಹಿಸಿರುವ ರೇಡಿಯೋವನ್ನು ಗುರುತಿಸುವ ದಿನವಾಗಿದೆ. ಪ್ರತಿವರ್ಷ ಫೆಬ್ರವರಿ 13 ಅನ್ನು ವಿಶ್ವ ರೇಡಿಯೋ ದಿನವನ್ನಾಗಿ ಆಚರಿಸಲಾಗುತ್ತಿದೆ. 2013ರ ಜನವರಿ 14ರಂದು ವಿಶ್ವಸಂಸ್ಥೆ ವಿಶ್ವ ರೇಡಿಯೋ ದಿನವನ್ನು ಘೋಷಿಸಿತು. ಹಲವು ಶತಮಾನಗಳಿಂದ ಜಗತ್ತಿನಾದ್ಯಂತ ಜನರಿಗೆ ಮಾಹಿತಿ, ಮನರಂಜನೆ ಹಾಗೂ ಶಿಕ್ಷಣವನ್ನು ನೀಡುವ ಪ್ರಬಲ ಮಾಧ್ಯಮವಾಗಿ ರೂಪುಗೊಂಡಿದೆ. ಡಿಜಿಟಲ್ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದರೂ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ರೇಡಿಯೋ ಒಂದು ಪ್ರಬಲ ಮಾಧ್ಯಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಕಾಶವಾಣಿಯ ಮನ್ ಕಿ ಬಾತ್ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿದ್ದು, ಅದು ಆರಂಭವಾದ ನಂತರ ರೇಡಿಯೋ ಕೇಳುಗರ ಸಂಖ್ಯೆ ಮೊದಲಿಗಿಂತಲೂ ಅತ್ಯಧಿಕವಾಗಿದೆ. ರೇಡಿಯೋ ದಿನದ ಅಂಗವಾಗಿ ಇಂದು ದೇಶಾದ್ಯಂತ ಹಲವು ಕಾರ್ಯಕ್ರಮಗಳ್ನು ಆಯೋಜಿಸಲಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement