ನವದೆಹಲಿ: ಮತ್ತೆ ಸರ್ಕಾರದ ವಿರುದ್ಧ ಬಿಜೆಪಿ ಪೋಸ್ಟರ್ ವಾರ್ ಶುರುಮಾಡಿದೆ. ಲೋಡ್‌ಶೆಡ್ಡಿಂಗ್‌ನಿಂದಾಗಿ ಕರುನಾಡು ಕಗ್ಗತ್ತಲಲ್ಲಿ ಮುಳುಗಿದೆ. ಆದ್ರೆ ಇಂಧನ ಸಚಿವ ಕೆ.ಜೆ.ಜಾರ್ಜ್ ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂದು ಪೋಸ್ಟರ್ ವೈರಲ್ ಮಾಡಿದೆ.ಇದಕ್ಕೆ ಇಂಧನ ಸಚಿವ ಕೆ.ಜೆ ಜಾರ್ಜ್ ಪ್ರತಿಕ್ರಿಯಿಸಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು 4 ವರ್ಷಗಳ ಕಾಲ ಇಂಧನ ಇಲಾಖೆಯಲ್ಲಿ ಏನು ಕೆಲಸ ಮಾಡಿಲ್ಲ. ಬಿಜೆಪಿ ಫೆಲ್ಯೂವರ್ನಿಂದ ಈಗ ನಮಗೆ ಸಮಸ್ಯೆ ಉಂಟಾಗಿದೆ. ಡಿಕೆ ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ವಿದ್ಯುತ್ ಹೆಚ್ಚಿಸಿದ್ದೆವು. ಆದ್ರೆ, ಬಿಜೆಪಿ ಸರ್ಕಾರ ಈ ಹಿಂದೆ ಕೂಡಗಿಯಿಂದ 250 ಮೇಗಾ ವಾರ್ಟ್ ವಿದ್ಯುತ್ ತೆಗೆದುಕೊಳ್ಳದೆ ದೆಹಲಿಯವರಿಗೆ ಬಿಟ್ಟು ಕೊಟ್ಟಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಾವು ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ. ಸ್ವಲ್ಪ ದಿನಗಳಲ್ಲಿ ಸರಿ ಹೋಗುತ್ತದೆ. ನಾನು ಎಲ್ಲಿ ಹೋಗಿದ್ದೇನೆ ಎನ್ನುವುದನ್ನ ಪೋಸ್ಟ್ ಮಾಡಿದ್ದೆ. ನಾನು ಕತ್ತಲೆಗೆ ತಳ್ಳಿಲ್ಲ ಬಿಜೆಪಿಯವರು ಕತ್ತಲಿಗೆ ತಳ್ಳಿದ್ದಾರೆ. 4 ತಿಂಗಳಿನಿಂದ ಕತ್ತಲಿನಲ್ಲಿದ್ದ ರಾಜ್ಯ ಬೆಳಕಿಗೆ ಬಂದಿದೆ ಎಂದರು. ಬಿಜೆಪಿಯವರು ಕತ್ತಲೆಯಲ್ಲೇ ಇದ್ದರು. ಅದಕ್ಕೆ ಜನ ಬಿಜೆಪಿಯವರಿಗೆ ಬುದ್ದಿ ಕಲಿಸಿದ್ದಾರೆ. ಅಧಿಕಾರ ಕಳೆದುಕೊಂಡಿರುವುದರಿಂದ ಏನಾದ್ರು ಮಾಡಬೇಕು ಎಂದು ಹೀಗೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.