ನವದೆಹಲಿ: ರಿಲಯನ್ಸ್ ಎಡಿಎ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ಪತ್ನಿ ಟೀನಾ ಅಂಬಾನಿ ವಿದೇಶಿ ವಿನಿಮಯ ನಿಯಮ ಉಲ್ಲಂಘನೆ(ಫೆಮಾ) ಆರೋಪದ ಪ್ರಕರಣದಲ್ಲಿಇಂದು ಇಡಿ ತನಿಖೆಗೆ ಹಾಜರಾಗಿದ್ದಾರೆ.
ಜಾರಿ ನಿರ್ದೇಶನಾಲಯದ ಅಕಾರಿಗಳು ನಿನ್ನೆ ಅನಿಲ್ ಅಂಬಾನಿ ಅವರನ್ನು ವಿಚಾರಣೆ ನಡೆಸಿದ್ದು, ಅವರ ಪತ್ನಿಗೆ ಇಡಿ ನೊಟೀಸ್ ನೀಡಿರುವುದರಿಂದ ಇಂದು ಅವರು ವಿಚಾರಣೆಗೆ ಹಾಜರಾದರು. ಇದು ಅಂಬಾನಿ ಕಂಪನಿಗಳಲ್ಲಿನ ಹೂಡಿಕೆಗೆ ಸಂಬಂಧಿಸಿದ ಹೊಸ ಪ್ರಕರಣ ಎಂದು ಮೂಲಗಳು ತಿಳಿಸಿವೆ.
64 ವರ್ಷದ ಅನಿಲ್ ಅಂಬಾನಿ ಅವರು ಈ ಹಿಂದೆ 2020 ರಲ್ಲಿ ಯೆಸ್ ಬ್ಯಾಂಕ್ ಪ್ರವರ್ತಕ ರಾಣಾ ಕಪೂರ್ ಹಾಗೂ ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದರು.
2022ರ ಆಗಸ್ಟ್ ತಿಂಗಳಲ್ಲಿ ಅನಿಲ್ ಅಂಬಾನಿಗೆ ಐಟಿ ಇಲಾಖೆಯಿಂದ ನೋಟೀಸ್ ಹೋಗಿತ್ತು. ಎರಡು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ 814 ಕೋಟಿಗೂ ಅಕ ಮೊತ್ತದ ಅಘೋಷಿತ ಹಣದ ಮೇಲಿನ 420 ಕೋಟಿ ತೆರಿಗೆ ವಂಚನೆ ಆರೋಪದ ಮೇಲೆ ನೊಟೀಸ್ ನೀಡಲಾಗಿತ್ತು.