ದೇಹದ ಉತ್ತಮ ಕಾರ್ಯ ನಿರ್ವಹಣೆಗೆ ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳ ಅಗತ್ಯವಿದೆ. ನೀವು ಬೆಳಗಿನ ಉಪಾಹಾರದಲ್ಲಿ ಹೆಚ್ಚಿನ ಪ್ರೋಟೀನ್ ಭರಿತ ಉಪಹಾರ ಸೇವಿಸಿದರೆ ನಿಮ್ಮ ದೇಹವು ಇಡೀ ದಿನದ ಕಾರ್ಯ ಚಟುವಟಿಕೆಗೆ ಶಕ್ತಿ ಪಡೆಯುತ್ತದೆ. ನೀವು ತೂಕ ನಿಯಂತ್ರಿಸಲು ಬಯಸಿದರೆ ಅಥವಾ ಕಡಿಮೆ ಮಾಡುತ್ತಿದ್ದರೆ ಪ್ರೋಟೀನ್ ಸೇವನೆ ನಿಮಗೆ ಹೆಚ್ಚು ಮುಖ್ಯ ಆಗಿದೆ. ಪೌಷ್ಟಿಕತಜ್ಞ ಮತ್ತು ಆಹಾರ ತಜ್ಞ, ಫ್ಯಾಟ್ ಟು ಸ್ಲಿಮ್ ನಿರ್ದೇಶಕಿ ಶಿಖಾ ಅಗರ್ವಾಲ್ ಶರ್ಮಾ ಅವರ ಪ್ರಕಾರ, ಪರಾಠಾ, ಪೂರಿಗಳು ಅಥವಾ ಬ್ರೆಡ್-ಜಾಮ್‌ಗಳ ಬದಲಿಗೆ ಬೆಳಗಿನ ಉಪಾಹಾರಕ್ಕಾಗಿ ನೀವು ಕೆಲವು ಆರೋಗ್ಯಕರ ಮತ್ತು ಪ್ರೋಟೀನ್ ಸಮೃದ್ಧ ದೇಸಿ ಪದಾರ್ಥ ಸೇವಿಸಬೇಕು. ಆಹಾರದಲ್ಲಿ ಇವುಗಳ ಸೇವನೆ ದೇಹದ ಆರೋಗ್ಯ ಮತ್ತು ಸದೃಢವಾಗಿಸಲು ಇದು ಸಹಾಯ ಮಾಡುತ್ತದೆ.
ಮೊಳಕೆ ಕಾಳುಗಳ ಸಲಾಡ್
ಬೆಳಗಿನ ಉಪಾಹಾರಕ್ಕೆ ನೀವು ಹಗುರ ಮತ್ತು ಆರೋಗ್ಯಕರ ಪದಾರ್ಥ ಸೇವನೆ ಮಾಡಲು ಬಯಸಿದರೆ ನೀವು ಮೊಳಕೆ ಕಾಳುಗಳ ಸಲಾಡ್ ಸೇವನೆ ನಿಮಗೆ ಸಾಕಷ್ಟು ಸೂಕ್ತ ಆಗಿದೆ. ಮುಖ್ಯ ವಿಷಯವೆಂದರೆ ಅದನ್ನು ತಯಾರಿಸುವುದು ಸುಲಭ. ರಾಜ್ಮಾ, ಮೂಂಗ್ ದಾಲ್ ಮತ್ತು ಕಾಳು ವಸ್ತುಗಳನ್ನು ಬೆರೆಸಿ ನೀವು ಇದನ್ನು ಮಾಡಬಹುದು. ಅದರ ರುಚಿ ಮತ್ತು ಪೋಷಣೆ ಹೆಚ್ಚಿಸಲು, ನೀವು ಇದಕ್ಕೆ ಈರುಳ್ಳಿ, ಟೊಮ್ಯಾಟೊ, ಹಸಿರು ಮೆಣಸಿನಕಾಯಿ ಮತ್ತು ಶುಂಠಿ, ಚೀಸ್ ಅನ್ನು ಸೇರಿಸಬಹುದು.
ಲಘುವಾಗಿ ಹುರಿದ ಮೊಟ್ಟೆ
ಸಹಜವಾಗಿ ಬೇಯಿಸಿದ ಮೊಟ್ಟೆಗಳು ಪ್ರೋಟೀನ್ ನ ಉತ್ತಮ ಮೂಲ. ಆದರೆ ಲಘುವಾಗಿ ಹುರಿದ ಮೊಟ್ಟೆಗಳು ಸಹ ನಿಮಗೆ ಪ್ರೋಟೀನ್ ನೀಡುತ್ತದೆ. ಉತ್ತಮ ಭಾಗ ಅಂದ್ರೆ ಅದನ್ನು ತಯಾರಿಸುವುದು ಸುಲಭ. ನಿಮ್ಮ ಉಪಹಾರ ತಯಾರಿಸಲು ನಿಮಗೆ ಬೇಕಾಗಿರುವುದು ಕರಿಮೆಣಸು, ಹಾಲು, ಮೊಟ್ಟೆ ಮತ್ತು ಬೆಣ್ಣೆ. ಹೆಚ್ಚು ಪೌಷ್ಟಿಕಾಂಶ ಮಾಡಲು ನೀವು ಹೆಚ್ಚಿನ ತರಕಾರಿ ಸೇರಿಸಬಹುದು.
ಬೇಸನ್ ಚಿಲ್ಲಾ
ಬೇಸನ್ ಚೀಲಾ ಭಾರತದ ಅತ್ಯಂತ ನೆಚ್ಚಿನ ಉಪಹಾರ. ಅದ್ಭುತ ವಿಷಯವೆಂದರೆ ಈ ಖಾದ್ಯವು ರುಚಿಕರ. ಜೊತೆಗೆ ಆರೋಗ್ಯದ ಉಗ್ರಾಣ. ಇದನ್ನು ಕಡಲೆ ಹಿಟ್ಟಿನಿಂದ ಚೀಸ್ ಸ್ಟಫ್ಡ್‌ನಿಂದ ತಯಾರಿಸಲಾಗುತ್ತದೆ. ಕಡಲೆ ಪ್ರೋಟೀನ್‌ನ ಅತ್ಯುತ್ತಮ ಮೂಲ. ನೀವು ಮೊಸರು ಅಥವಾ ಉಪ್ಪಿನಕಾಯಿ ಜೊತೆ ನಿಮ್ಮ ಚಿಲ್ಲಾ ಸೇವಿಸಬಹುದು.
ಹೆಸರು ಬೇಳೆ ದಾಲ್ ಖಿಚಡಿ
ಹೆಸರು ಬೇಳೆ ದಾಲ್ ಖಿಚಡಿ ಭಾರತೀಯರ ನೆಚ್ಚಿನ ಆಹಾರ. ಹೆಸರು ಬೇಳೆ, ಅಕ್ಕಿ ಮತ್ತು ಕೆಲವು ತರಕಾರಿಗಳನ್ನು ಬೆರೆಸಿ ತಯಾರಿಸಿದ ಖಿಚಡಿ ಪ್ರೋಟೀನ್ ಸೇರಿದಂತೆ ಎಲ್ಲಾ ಪೋಷಕಾಂಶಗಳ ನಿಧಿ. ನಿಮ್ಮ ಆಯ್ಕೆಯ ಯಾವುದೇ ದಾಲ್ ಅನ್ನು ನೀವು ಬಳಸಬಹುದು. ಹೆಸರು ಬೇಳೆ ದಾಲ್ ಖಿಚಡಿ ಸಸ್ಯ ಆಧಾರಿತ ಪ್ರೋಟೀನ್‌ನ ಅತ್ಯುತ್ತಮ ಮೂಲ.
ಪನೀರ್ ಭುರ್ಜಿ
ಕರಿದ ಪನೀರ್, ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ತಯಾರಿಸಿದ ಈ ಕೆನೆ ಮತ್ತು ರುಚಿಕರ ಖಾದ್ಯವು ನಿಮಗೆ ರುಚಿಯ ಜೊತೆಗೆ ಸಂಪೂರ್ಣ ಪೋಷಣೆ ನೀಡುತ್ತದೆ.