ರಾಜ್ಯದಲ್ಲಿ ಸಾರ್ವಜನಿಕರಿಗೆ ಆಸ್ತಿ ನೋಂದಣಿಯನ್ನು ಮಾಡಿಕೊಳ್ಳಲು ಜನಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರಲು ಸಂಬಂಧಪಟ್ಟ ಇಲಾಖೆಯಿಂದ ನೂತನ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ಸ್ಥಿರಾಸ್ತಿಯನ್ನು ನೋಂದಣಿ ಮಾಡಿಕೊಳ್ಳಲು ರಾಜ್ಯದ ಸಾರ್ವಜನಿಕರಿಗೆ ನೆರವಾಗಲು ನೋಂದಣಿ ಇಲಾಖೆಯಿಂದ ಇದೆ ಸೆಪ್ಟೆಂಬರ್ ಮೊದಲ ವಾರದಿಂದ ರಾಜ್ಯಾದ್ಯಂತ “ಎನಿವೇರ್ ನೋಂದಣಿ” (anywhere property registration)ಎನ್ನುವ ಯೋಜನೆಯನ್ನು ಅನುಷ್ಥಾನ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಈ ವ್ಯವಸ್ಥೆಯು ಪ್ರಯೋಗಿಕವಾಗಿ ತುಮಕೂರು ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ಜಾರಿ ಮಾಡಲಾಗಿದ್ದು ಈಗ ಇತರೆ ಜಿಲ್ಲೆಯಲ್ಲಿಯು ಇಲಾಖೆಯಿಂದ ಜಾರಿಗೆ ತರಲಾಗುತ್ತಿದೆ.
ಪ್ರಸ್ತುತ ಆಸ್ತಿ ನೋಂದಣಿಗೆ ಸಾರ್ವಜನಿಕರು ಸರಕಾರಿ ಕಚೇರಿಯನ್ನು ಹೆಚ್ಚು ಸಮಯದವರೆಗೆ ಅಲೆದಾಡುವ ಪರಿಸ್ಥಿತಿ ಇದ್ದು ಇದನ್ನು ತಪ್ಪಿಸಲು ಕಡಿಮೆ ಸಮಯದಲ್ಲಿ ಹಾಗೂ ಸರಕಾರಿ ಕಚೇರಿಗಳನ್ನು ಅಲೆದಾಡುವುದನ್ನು ತಪ್ಪಿಸಲು “ಎನಿವೇರ್ ನೋಂದಣಿ” ವ್ಯವಸ್ಥೆ ಸಹಕಾರಿಯಾಗಲಿದೆ.
ಏನಿದು “ಎನಿವೇರ್ ನೋಂದಣಿ” ವ್ಯವಸ್ಥೆ?
ಸದ್ಯ ರಾಜ್ಯಾದ್ಯಂತ ಆಸ್ತಿ ನೋಂದಣಿಯನ್ನು ತಮ್ಮ ವ್ಯಾಪ್ತಿಗೆ ಒಳಪಡುವ ನಿರ್ದಿಷ್ಟ ಉಪ ನೋಂದಣಿ(sub registrar office) ಕಚೇರಿಯಲ್ಲಿಯೇ ಆಸ್ತಿಯನ್ನು ನೋಂದಣಿ ಮಾಡಿಕೊಳ್ಳಬೇಕಿತ್ತು ಅದರೆ ಈ ನೂತನ “ಎನಿವೇರ್ ನೋಂದಣಿ” ವ್ಯವಸ್ಥೆಯಲ್ಲಿ ಇದಕ್ಕೆ ಸೂಕ್ತ ಪರಿಹಾರವನ್ನು ನೀಡಲಾಗಿದ್ದು ಸಾರ್ವಜನಿಕರು ತಮ್ಮ ಹತ್ತಿರದ ಅಥವಾ ಮತ್ತಾವುದೇ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಆಸ್ತಿ ನೋಂದಣಿಯನ್ನು ಮಾಡಿಕೊಳ್ಳಲು ಈ “ಎನಿವೇರ್ ನೋಂದಣಿ” ವ್ಯವಸ್ಥೆಯ ಮೂಲಕ ಅವಕಾಶ ಮಾಡಿಕೊಡಲಾಗುತ್ತದೆ.
“ಎನಿವೇರ್ ನೋಂದಣಿ” ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಆಗುವ ಪ್ರಯೋಜನಗಳೇನು?
1) ಸಾರ್ವಜನಿಕರು ಈ ಹಿಂದೆ ಆಸ್ತಿ ನೋಂದಣಿಗೆ ವ್ಯಯಿಸುತ್ತಿದ್ದ ಸಮಯಕ್ಕಿಂತ ಕಡಿಮೆ ಸಮಯ ತೆದೆದುಕೊಳ್ಳುತ್ತದೆ ಇದರಿಂದ ಜನರ ಸಮಯ ಮತ್ತು ಹಣ ಉಳಿತಾಯವಾಗುತ್ತದೆ.
2) ಸರಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಈ ಹಿಂದೆ ತೆಗೆದುಕೊಳ್ಳುತಿದ್ದ ಸಮಯಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಇದರಿಂದ ಅನಗತ್ಯ ಕಿರಿಕಿರಿ ಮತ್ತು ವಿಳಂಬಕ್ಕೆ ಕಡಿವಾಣ ಹಾಕಿದಂತಾಗುತ್ತದೆ.
3) “ಎನಿವೇರ್ ನೋಂದಣಿ” ವ್ಯವಸ್ಥೆ ಜಾರಿಯಿಂದ ಆಯ್ದ ಕಚೇರಿಗಳಲ್ಲಿ ನೋಂದಣಿ ದಟ್ಟಣೆ ತಗ್ಗಿಸಬಹುದು.
4) ಆಸ್ತಿ ನೋಂದಣಿ ಅರ್ಜಿ ವಿಲೇವಾರಿಗೆ ಎಲ್ಲಾ ಸಬ್ ರಿಜಿಸ್ಟರ್ ಕಚೇರಿಗಳಿಗೆ ಸಮಾನವಾಗಿ ಕೆಲಸ ಹಂಚಿಕೆಗೆ ಸಾಧ್ಯವಾಗುತ್ತದೆ.
“ಎನಿವೇರ್ ನೋಂದಣಿ” ವ್ಯವಸ್ಥೆಯ ವಿಶೇಷತೆಗಳು:
ಸದ್ಯ ಸಾರ್ವಜನಿಕರು ಸ್ಥಿರಾಸ್ತಿ ಆಸ್ತಿ ನೋಂದಣಿಯನ್ನು ಮಾಡಿಕೊಳ್ಳಲು ಆಯಾ ಸಂಬಂಧಪಟ್ಟ ಸಬ್ ರಿಜಿಸ್ಟರ್ ಕಚೇರಿಗಳಿಗೆ ಮಾಡಿಕೊಳ್ಳಲು ಮಾತ್ರ ಅವಕಾಶವಿದ್ದು ಇದ್ದರಿಂದ ನಿರ್ದಿಷ್ಟ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಅಧಿಕಾರಿಗಳು ಲಭ್ಯವಿಲ್ಲದ ಪಕ್ಷದಲ್ಲಿ ಅಥವಾ ಸಮರ್ಪಕ ಸ್ಪಂದನೆ ನೀಡದೆ ಇದ್ದಲ್ಲಿ, ಅನಗತ್ಯ ಆಕ್ಷೇಪಣೆಗಳನ್ನು ತೆಗೆದು ವಿಳಂಬ ಮಾಡಿದರೆ ಸಾರ್ವಜನಿಕರಿಗೆ ಆಸ್ತಿ ನೋಂದಣಿಗೆ ವಿಳಂಬವಾಗುತ್ತಿತ್ತು.
ಅದರೆ “ಎನಿವೇರ್ ನೋಂದಣಿ” ವ್ಯವಸ್ಥೆಯಲ್ಲಿ ಈ ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕರಿಗೆ ಬಹು ಸಬ್ ರಿಜಿಸ್ಟರ್ ಕಚೇರಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುವುದರಿಂದ ಇಂತಹ ಸನ್ನಿವೇಶಗಳಲ್ಲಿ ಬೇರೆ ಸಬ್ ರಿಜಿಸ್ಟರ್ ಕಚೇರಿಗಳಿಗೆ ಅರ್ಜಿಯನ್ನು ಸ್ಥಳಾಂತರ ಮಾಡಿಕೊಳ್ಳಬಹುದು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.