ದೆಹಲಿ: ಆಫರ್ ನೀಡಿರುವ 2000 ಜನರಿಗೆ ಕೆಲಸ ಕೊಡುವುದಾಗಿ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ತಿಳಿಸಿದ್ದಾರೆ.
ಆಫರ್ ನೀಡಿದವರಿಗೆ ಇನ್ಫೋಸಿಸ್ ಕೆಲಸಕ್ಕೆ ಸೇರಿಸಿಕೊಳ್ಳಲಿದೆ. ಈ ಪ್ರಕ್ರಿಯೆ ದಿನಾಂಕ ಮುಂದೂಡಲಾಗಿದೆಯೇ ಹೊರತು ನೇಮಕಾತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲವೆಂದು ಅವರು ಹೇಳಿದ್ದಾರೆ.
2022ನೇ ಬ್ಯಾಚ್ ನ 2000 ಬಿಇ ವಿದ್ಯಾರ್ಥಿಗಳ ನೇಮಕಾತಿ ಮತ್ತು ವೇತನವಿಲ್ಲದ ತರಬೇತಿ, ಅನಿರೀಕ್ಷಿತ ಹೆಚ್ಚುವರಿ ಮೌಲ್ಯಮಾಪನ ನಡೆಸುವಲ್ಲಿ ಕಂಪನಿ ವಿಳಂಬ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಐಟಿ ಮತ್ತು ಐಟಿಇಎಸ್ ಒಕ್ಕೂಟವಾದ ಎನ್ಇಟಿಇಎಸ್ ವತಿಯಿಂದ ಈ ಬಗ್ಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ದೂರು ದಾಖಲಿಸಿದ್ದು, ಇದರ ಬೆನ್ನಲ್ಲೇ ಸಲೀಲ್ ಪರೇಖ್ ಸ್ಪಷ್ಟನೆ ನೀಡಿ, ಆಫರ್ ಕೊಟ್ಟಿರುವ 2,000 ಜನರಿಗೆ ಕೆಲಸ ಕೊಡುವುದಾಗಿ ತಿಳಿಸಿದ್ದಾರೆ.