ಬೆಂಗಳೂರು: ಬಿಬಿಎಂಪಿ ನಗರದಲ್ಲಿರುವ ಅರ್ಧದಷ್ಟು ಬೀದಿನಾಯಿಗಳಿಗೆ ಮೈಕ್ರೊ ಚಿಪ್ ಅಳವಡಿಸಲು ಮುಂದಾಗಿದೆ.
ನಗರದಲ್ಲಿ 2.79 ಲಕ್ಷ ಬೀದಿನಾಯಿಗಳಿದ್ದು, 1,84,671 ಬೀದಿನಾಯಿಗಳಿಗೆ ಮೈಕ್ರೊ ಚಿಪ್ಗಳನ್ನು 90 ದಿನದಲ್ಲಿ ಅಳವಡಿಸಲು ಟೆಂಡರ್ ಕರೆಯಲಾಗಿದೆ. ಸುಮಾರು 58 ಲಕ್ಷ ವೆಚ್ಚ ಮಾಡಲು ನಿರ್ಧರಿಸಲಾಗಿದೆ.
ಫೈವ್ ಇನ್ ಒನ್ ಲಸಿಕೆಗಳನ್ನು ಮೊದಲ ಬಾರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳಿಗೆ ನೀಡಲಾಗುತ್ತಿದೆ. ಕೋರೆಹಲ್ಲು ರೋಗ ಸೇರಿದಂತೆ ಹಲವು ರೋಗಗಳಿಂದ ಬೀದಿ ನಾಯಿಗಳಿಗೆ ರಕ್ಷಣೆ ನೀಡಲು ಏಪ್ರಿಲ್ನಲ್ಲಿ ಲಸಿಕೆ ನೀಡುವ ಅಭಿಯಾನ ಆರಂಭವಾಗಿದೆ. ಲಸಿಕೆ ಖರೀದಿಗೂ ಟೆಂಡರ್ ಕರೆಯಲಾಗಿದೆ.!