ನವದೆಹಲಿ : ಭಾರತದ ಬ್ಯಾಂಕ್ ವಲಯವು ಎಲ್ಲ ಶನಿವಾರಗಳನ್ನು ಅಧಿಕೃತ ರಜಾದಿನಗಳಾಗಿ, ಐದು ದಿನಗಳು ಮಾತ್ರ ಕರ್ತವ್ಯದ ದಿನಗಳೆಂದು ಘೋಷಿಸಲು ಭಾರತೀಯ ಬ್ಯಾಂಕ್‌ಗಳ ಒಕ್ಕೂಟ ( ಐಬಿಎ) ಕೇಂದ್ರ ವಿತ್ತ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ ಎಂದು ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಪ್ರಸ್ತುತ, ಬ್ಯಾಂಕ್ ಶಾಖೆಗಳು ತಿಂಗಳ ಮೊದಲ, ಮೂರನೇ ಮತ್ತು ಐದನೇ ಶನಿವಾರದಂದು ಕಾರ್ಯನಿರ್ವಹಿಸುತ್ತವೆ. ಉಳಿದ ಎರಡನೇ ಮತ್ತು ನಾಲ್ಕನೇ ಶನಿವಾರಗಳು ರಜಾದಿನಗಳು ಎಂದು 2015 ರಲ್ಲಿ ಆರ್‌ಬಿಐ ಮತ್ತು ಕೇಂದ್ರವು ಭಾರತೀಯ ಬ್ಯಾಂಕ್‌ಗಳ ಸಂಘವು ರಜಾದಿನಗಳಾಗಿ ಘೋಷಣೆ ಮಾಡಿತ್ತು.
ಆದರೆ ಇದೀಗ ಎಲ್ಲಾ ಶನಿವಾರ ಮತ್ತು ಭಾನುವಾರದಂದು ರಜೆ ನೀಡಬೇಕೆಂಬ ವಿವಿಧ ಬ್ಯಾಂಕ್ ಒಕ್ಕೂಟಗಳ ಒತ್ತಾಯವನ್ನು ಕೇಂದ್ರ ಸರ್ಕಾರ ಒಪ್ಪಿ ಅನುಷ್ಠಾನಗೊಳಿಸಿದರೆ, ಅದು ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಆರ್ಥಿಕ ಪರಿಣಾಮ ಬೀರಬಹುದು ಎಂದು ತಿಳಿದು ಬಂದಿದೆ.
ಇನ್ನು ಈ ಬೇಡಿಕೆಯನ್ನು ಸರ್ಕಾರ ಮತ್ತು ಆರ್‌ಬಿಐ ಅನುಮೋದಿಸಿದರೆ, ಬ್ಯಾಂಕ್ ನೌಕರರು ಶಾಖೆಗಳಲ್ಲಿ ದೈನಂದಿನ ಕೆಲಸದ ಸಮಯವನ್ನು 45 ನಿಮಿಷಗಳವರೆಗೆ ವಿಸ್ತರಿಸಲಾಗುವುದು ಎಂದು ವರದಿಯಾಗಿದೆ