ನವದೆಹಲಿ: 10 ಹಾಗೂ 12ನೇ ತರಗತಿಗಳಿಗೆ ವರ್ಷಕ್ಕೆ 2 ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಯೋಜನೆಗೆ CBSE ಸಮ್ಮತಿಸಿದೆ.
ಸಂಪೂರ್ಣ ಪಠ್ಯಕ್ರಮದ ಈ ಪರೀಕ್ಷೆಯು ಜನವರಿ ಹಾಗೂ ಏಪ್ರಿಲ್‌ನಲ್ಲಿ ನಡೆಯಲಿದೆ. 2025-26ರ ಸಾಲಿನ ಶೈಕ್ಷಣಿಕ ವರ್ಷದಿಂದಲೇ CBSEಯಲ್ಲಿ ಹೊಸ ಮಾದರಿ ಜಾರಿಗೆ ತರಲು ಕೇಂದ್ರವು ಸಿದ್ದತೆ ನಡೆಸಿದೆ.
ಹೊಸ ಮಾದರಿಯ ಮೊದಲ ಬೋರ್ಡ್ ಪರೀಕ್ಷೆಯನ್ನು ಜನವರಿ 2026ರಲ್ಲಿ, ಎರಡನೇ ಪರೀಕ್ಷೆಯನ್ನು ಏಪ್ರಿಲ್ 2026ರಲ್ಲಿ ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.