ಇನ್ಮುಂದೆ SSLC ವಿದ್ಯಾರ್ಥಿಗಳಿಗೆ 20% ಗ್ರೇಸ್ ಮಾರ್ಕ್ ಇರಲ್ಲ!

WhatsApp
Telegram
Facebook
Twitter
LinkedIn

20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್ ಕೊಟ್ಟರೂ ಫಲಿತಾಂಶ ಕುಸಿತ ಆಗಿರುವುದರಿಂದ ಇನ್ಮುಂದೆ SSLC ವಿದ್ಯಾರ್ಥಿಗಳಿಗೆ 20% ಗ್ರೇಸ್ ಮಾರ್ಕ್ ನೀಡುವುದನ್ನು ಕೈ ಬಿಡುವ ನಿರ್ಧಾರಕ್ಕೆ ಶಿಕ್ಷಣ ಇಲಾಖೆ ಬಂದಿದೆ.ಪ್ರಾಮಾಣಿಕವಾಗಿ ಓದಿ ಕಷ್ಟ ಪಟ್ಟು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವರದಾನ ಆಗುವುದರಲ್ಲಿ  ಯಾವುದೇ ಅನುಮಾನ ಇಲ್ಲ

ವೆಬ್ ಕಾಸ್ಟಿಂಗ್, ಲೈವ್ ಸ್ಟ್ರೀಮ್, ಈ ತರಹ ಅನೇಕ ಕಠಿಣ ನಿಯಮ ಜಾರಿ ಮಾಡಿ ಕಳೆದ ಸಾಲಿನ SSLC ಪರೀಕ್ಷೆ ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಯಾಗಿತ್ತು. ಅನುತ್ತೀರ್ಣದ. ಲಿಸ್ಟ್ ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿದ್ರು. ಅಂತಹ ವಿದ್ಯಾರ್ಥಿಗಳ ಪಾಲಿಗೆ ಬರೋಬ್ಬರಿ 20% ಗ್ರೇಸ್ ಮಾರ್ಕ್ಸ್ ಅಂತ ಇಲಾಖೆ ಕೊಟ್ಟಿತ್ತು. ಆದ್ರೀಗ ಅದೇ 20% ಗ್ರೇಸ್ ಮಾರ್ಕ್ ಅನ್ನು ಕೈ ಬಿಡುವ ನಿರ್ಧಾರಕ್ಕೆ ಶಿಕ್ಷಣ ಇಲಾಖೆ ಬಂದು ನಿಂತಿದ್ದು, ಕೆಲವೇ ದಿನದಲ್ಲಿ ಅಧಿಕೃತ ಆದೇಶ ಹೊರ ಬೀಳಲಿದೆ.

ಕಳೆದ ಶೈಕ್ಷಣಿಕ ಸಾಲು ಅಂದ್ರೆ 2023/2024ರಲ್ಲಿ ಸುಮಾರು 6 ಲಕ್ಷದ 31 ಸಾವಿರದ 204 ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ರು. ಆ ಮೂಲಕ ರಾಜ್ಯದ ಒಟ್ಟಾರೆ ಫಲಿತಾಂಶ ಶೇ 73.40 ರಷ್ಟಾಗಿತ್ತು. ಅದಕ್ಕೂ ಹಿಂದಿನ ವರ್ಷ ಶೇ 83 ರಷ್ಟು ಫಲಿತಾಂಶ ಬಂದಿತ್ತು. ಇದರ ಜೊತೆಗೆ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್ ಕೊಟ್ಟರೂ ಫಲಿತಾಂಶ ಕುಸಿತ ಆಗಿರುವುದು ಸ್ಪಷ್ಟವಾಗಿತ್ತು. ಒಂದು ವೇಳೆ ಕೃಪಾಂಕ ಕೊಡದೇ ಹೋಗಿದ್ರೆ ಅದೆಷ್ಟೋ ಕಳಪೆ ರಿಸಲ್ಟ್ ಇಲಾಖೆಗೆ ಬರ್ತಾ ಇತ್ತು ಅನ್ನೋದು ಮುಜುಗರದ ವಿಚಾರ. ಒಟ್ಟಾರೆ ಕಲಿಕೆಯಲ್ಲಿ ಗುಣಮಟ್ಟ ಸಾಧಿಸಲು ಇಲಾಖೆ ಹಲವು ಸರ್ಕಸ್ ಮಾಡ್ತಿದೆ.. ಈ ಪೈಕಿ ಈ ಬಾರಿ ನೋ ಗ್ರೇಸ್ ಮಾರ್ಕ್ಸ್ ಕೂಡ ಒಂದು.

ಒಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕತೆ ಹಾಗೂ ಶಿಕ್ಷಣ ಗುಣಮಟ್ಟ ಕುಸಿತಕ್ಕೆ ಕಾರಣವಾಗುವ ಕೃಪಾಂಕ ವ್ಯವಸ್ಥೆಯನ್ನು ಕೈ ಬಿಡುವಂತೆ ಸಾಕಷ್ಟು ಒತ್ತಾಯ ಕೇಳಿ ಬಂದಿದೆ. ಕೊನೆಗೂ ಈ ಬಗ್ಗೆ ಶಿಕ್ಷಣ ಇಲಾಖೆ ನಿರ್ಧಾರ ಕೈಗೊಳ್ಳುವ ಮನಸ್ಸು ಮಾಡಿದೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon