ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಅವರನ್ನು ಇರಾನ್‌ನ ಟೆಹ್ರಾನ್‌ನಲ್ಲಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಹನಿಯಾ ಇದ್ದ ಟಹ್ರಾನ್ ನಿವಾಸವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ದೃಢಪಡಿಸಿದೆ. ಹತ್ಯೆಯ ಹೊಣೆಯನ್ನು ಯಾರೂ ತಕ್ಷಣವೇ ವಹಿಸಿಕೊಂಡಿಲ್ಲ. ಆದರೆ ಇಸ್ರೇಲ್ ಮೇಲೆ ಅನುಮಾನವು ಬಿದ್ದಿದೆ ಎಂದು ವರದಿಯಾಗಿದೆ. ಇಸ್ಮಾಯಿಲ್ ಹನಿಯಾ ಅವರನ್ನು ಕೊಲ್ಲುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿತ್ತು. ಹೀಗಾಗಿ ಇಸ್ರೇಲ್ ಮೇಲೆ ಆರೋಪಗಳು ಹೊರಿಸಲಾಗಿದೆ. ಇಸ್ಮಾಯಿಲ್ ಹನಿಯಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಹಮಾಸ್, ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ. ಇಸ್ಮಾಯಿಲ್ ಹನಿಯಾ ಅವರ ಸಾವನ್ನು ದೃಢೀಕರಿಸುವ ಹೇಳಿಕೆಯನ್ನು ಹಮಾಸ್ ಸಹ ಬಿಡುಗಡೆ ಮಾಡಿದೆ ಮತ್ತು ಇಸ್ರೇಲ್ ಹತ್ಯೆಯ ಆರೋಪವನ್ನೂ ಮಾಡಿದೆ. ಆದರೆ, ಈ ಬಗ್ಗೆ ಇಸ್ರೇಲ್ ಯಾವುದೇ ಹೇಳಿಕೆ ನೀಡಿಲ್ಲ.