ಬೇಕಾಗುವ ಸಾಮಾಗ್ರಿಗಳು:
ಬಾಳೆ ಹೂವು – 2, ಹುಣಸೆ ಹಣ್ಣು, ಬೆಲ್ಲ – ಸ್ವಲ್ಪ, ಖಾರದ ಪುಡಿ – 1 ಟೀ ಸ್ಪೂನ್, ಅರಶಿನಪುಡಿ – 1 ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ – 3 ಟೀ ಸ್ಪೂನ್, ಸಾಸಿವೆ – 1 ಟೀ ಸ್ಪೂನ್, ಉದ್ದಿನ ಬೇಳೆ – 1 ಟೀ. ಚಮಚ, ಮೆಣಸು – 2, ಕರಿಬೇವುಸೊಪ್ಪು
ಮಾಡುವ ವಿಧಾನ:
ಬಾಳೆಹೂವಿನ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. 3 ರಿಂದ 4 ಸಿಪ್ಪೆ ತೆಗೆಯಿರಿ. ಬಳಿಕ ಸಣ್ಣಗೆ ಹೆಚ್ಚಿದ ಬಾಳೆಹೂವನ್ನು ನೀರಿಗೆ ಹಾಕಬೇಕು. ನಂತರ ನೀರಿನಿಂದ ಚೆನ್ನಾಗಿ ಹಿಂಡಿ ತೆಗೆಯಬೇಕು. ಮೊದಲಿಗೆ ಪಾತ್ರೆಯಲ್ಲಿ 3 ಟೀ ಸ್ಪೂನ್ ನಷ್ಚು ಎಣ್ಣೆ ಹಾಕಿ. ಬಳಿಕ ಸಾಸಿವೆ, 1 ಟೀ ಸ್ಪೂನ್ ಉದ್ದಿನ ಬೇಳೆ, ಮೆಣಸು ಹಾಕಿ ಬಳಿಕ ಕರಿಬೇವುಸೊಪ್ಪು ಹಾಕಿ.
ಈ ಒಗ್ಗರಣೆಗೆ ಹೆಚ್ಚಿದ ಬಾಳೆಹೂವು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ 5 ಸ್ಪೂನ್ ನಷ್ಟು ಹುಣಸೆ ಹಣ್ಣಿನ ರಸ ಸೇರಿಸಿ, ಬೆಲ್ಲ ಸ್ವಲ್ಪ, 1 ಟೀ ಚಮಚ ಖಾರದ ಪುಡಿ, 1 ಟೀ ಸ್ಪೂನ್ ಅರಶಿನ ಪುಡಿ, ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಅರ್ಧ ಲೋಟದಷ್ಟು ನೀರು ಹಾಕಿ ಚೆನ್ನಾಗಿ ಬೇಯಿಸಿ. ಪಾತ್ರೆಗೆ ಮುಚ್ಚಳ ಇಟ್ಟು 10 ನಿಮಿಷ ಬೇಯಿಸಿ. ಬಳಿಕ ಕಾಯಿತುರಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಅನ್ನದ ಜೊತೆ ಸವಿಯಲು ರುಚಿಕರ ಪಲ್ಯ ರೆಡಿ.