ನವದೆಹಲಿ: ಇವಿಎಂ ಸತ್ತಿದೆಯೇ ಅಥವಾ ಜೀವಂತವಾಗಿದೆಯೇ ಎಂದು ನರೇಂದ್ರ ಮೋದಿ ಅವರು ಪ್ರಶ್ನಿಸುವ ಮೂಲಕ ಟ್ಯಾಂಪರ್ಡ್ ಆರೋಪಕ್ಕಾಗಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಎನ್‌ಡಿಎ ಸಂಸದೀಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿರೋಧ ಪಕ್ಷಗಳು ಯಾವಾಗಲೂ ಮತದಾನದ ಯಂತ್ರ ಮತ್ತು ಚುನಾವಣಾ ಪ್ರಕ್ರಿಯೆಯ ಬಗ್ಗೆ ಆರೋಪಿಸುತ್ತಾರೆ. ಇದರಿಂದಾಗಿ ಜನರು ಪ್ರಜಾಪ್ರಭುತ್ವ ಮತ್ತು ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ ಎಂದರು.
ಲೋಕಸಭಾ ಚುನಾವಣೆಯ ಫಲಿತಾಂಶ ಬಂದಾಗ, ನಾನು ಕೆಲಸದಲ್ಲಿ ನಿರತನಾಗಿದ್ದೆ. ನಂತರ ಫೋನ್ ಕರೆಗಳು ಬರಲಾರಂಭಿಸಿದವು. ನಾನು ನಾನು ಒಬ್ಬರಲ್ಲಿ ಮತ ಎಣಿಕೆಯ ಸಂಖ್ಯೆಗಳು ಸರಿಯಾಗಿವೆಯೇ? ಇವಿಎಂ ಬದುಕಿದೆಯೇ ಅಥವಾ ಸತ್ತಿದೆಯೇ? ಎಂದು ಕೇಳಿದ್ದೆ. ವಿರೋಧ ಪಕ್ಷದವರು ಅದನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಿದ್ದರು. ವಿರೋಧ ಪಕ್ಷಗಳು ಈ ಬಾರಿ ಇವಿಎಂ ಅಂತ್ಯಕ್ರಿಯೆ ಮಾಡುತ್ತಾರೆ ಎಂದು ನಾನು ಅಂದುಕೊಂಡಿದ್ದೆ ಎಂದು ಲೇವಡಿ ಮಾಡಿದ್ದಾರೆ.
ಇಂಡಿಯಾ ಒಕ್ಕೂಟದ ಸೋಲಿಗೆ ಇವಿಎಂ ಕಾರಣವೆಂದು ಕಿಡಿಕಾರುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಫಲಿತಾಂಶಗಳು ಅವರ ಬಾಯಿ ಮುಚ್ಚುವಂತೆ ಮಾಡಿತು. ಆದರೆ, 2029ರ ಲೋಕಸಭೆ ಚುನಾವಣೆಯಲ್ಲಿ ಬಹುಶಃ ಇವಿಎಂ ಮತ್ತೆ ಆರೋಪಿಯಾಗಬಹುದು ಎಂದು ಮೋದಿ ಅವರು ಹೇಳಿದ್ದಾರೆ.