ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ ಸಿಲುಕಿಕೊಂಡಿದ್ದ ಮೇಘಾಲಯ ರಾಜ್ಯದ 27 ಯಾತ್ರಿಕರು “ಈಜಿಪ್ಟ್ ಗಡಿಯನ್ನು ಸುರಕ್ಷಿತವಾಗಿ ದಾಟಿದ್ದಾರೆ” ಎಂದು ಸಿಎಂ ಕಾನ್ರಾಡ್ ಸಂಗ್ಮಾ ಹೇಳಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮತ್ತು ಇಸ್ರೇಲ್ನಲ್ಲಿರುವ ನಮ್ಮ ಭಾರತೀಯ ಮಿಷನ್ನ ಪ್ರಯತ್ನಗಳ ಮೂಲಕ ಯಾತ್ರಾರ್ಥಿಗಳನ್ನು ರಕ್ಷಿಸಲಾಗಿದೆ ಎಂದು ಸಂಗ್ಮಾ ಮಾಹಿತಿ ನೀಡಿದ್ದಾರೆ. ಯುದ್ಧವು ಸುಮಾರು 500 ಜನರನ್ನು ಬಲಿ ತೆಗೆದುಕೊಂಡಿದೆ.