ನವದೆಹಲಿ: ಇಸ್ರೇಲ್‌ನಲ್ಲಿ ಉಗ್ರರ ಅಟ್ಟಹಾಸ ಮಿತಿಮೀರಿದೆ. ಅನೇಕ ಸಾವು-ನೋವುಗಳು ಸಂಭವಿಸುತ್ತಲೇ ಇವೆ. ಈ ಹಿನ್ನೆಲೆ ಇಸ್ರೇಲ್ ಪ್ರಧಾನ ಮಂತ್ರಿಗೆ ಫೋನ್ ಕರೆ ಮಾಡಿದ ಬಾರತದ ಪ್ರಧಾನ ನಂತ್ರಿ ನರೇಂದ್ರ ಮೋದಿ, ಅಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.
ದೂರವಾಣಿ ಕರೆಯಲ್ಲಿ ಇಸ್ರೇಲ್‌ನ ಸದ್ಯದ ಸ್ಥಿತಿ ಬಗ್ಗೆ ಇಸ್ರೇಲ್ ಪ್ರಧಾನಿ ನೇತನ್ಯಾಹು, ಮೋದಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಅಲ್ಲಿನ ಬೆಳವಣಿಗೆಗಳ ಬಗ್ಗೆಯೂ ಸಮಲೋಚನೆ ನಡೆಯಿತು ಎಂದು ತಿಳಿದ ಬಂದಿದೆ. ಇದೇ ವೇಳೆ ಇಸ್ರೇಲ್‌ನಲ್ಲಿ ನೆಲೆಸಿರುವ ಭಾರತೀಯರ ಸುರಕ್ಷತೆ ಬಗ್ಗೆ ನರೇಂದ್ರ ಮೋದಿ ಮಾಹಿತಿ ಪಡೆದುಕೊಂಡರು. ಭಾರತ ಸದಾ ಇಸ್ರೇಲ್ ಜೊತೆಯಿರಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ. ಇಸ್ರೇಲ್ ಕೈಗೊಳ್ಳುವ ನಿರ್ಧಾರಕ್ಕೆ ಭಾರತ ಬೆಂಬಲವಾಗಿ ನಿಲ್ಲಲಿದೆ ಎಂದು ಇಸ್ರೇಲ್ ಪ್ರಧಾನಿ ನೇತನ್ಯಾಹುವಿಗೆ ಭರವಸೆ ನೀಡಿದರು.