ಇಸ್ರೆಲ್ : ಪೇಜರ್ ಮತ್ತು ವಾಕಿಟಾಕಿ ಸ್ಪೋಟದ ಬಳಿಕ ಲೆಬನಾನ್ ನ ಹಿಜ್ಬುಲ್ಲಾ ಉಗ್ರರು ಇದೀಗ ಇಸ್ರೇಲ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. 100ಕ್ಕೂ ಅಧಿಕ ರಾಕೆಟ್ ಗಳನ್ನು ಇಸ್ರೇಲ್ ನಗರದ ಮೇಲೆ ಹಾರಿಸಿರುವ ಹಿಜ್ಬುಲ್ಲಾ ಉಗ್ರರು, ಇಸ್ರೇಲ್‌ನ ಹಲವು ಸೇನಾ ನೆಲೆಗಳು ಧ್ವಂಸಗೊಂಡಿದ್ದು, ಇಸ್ರೇಲ್ ಸೇನೆಯ 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಪೈಕಿ ಇಸ್ರೇಲ್ ಸೇನೆಯ ಹಿರಿಯ ಅಧಿಕಾರಿ ಹಾಗೂ ಮಹಿಳೆಯರು ಮತ್ತು ಮಕ್ಕಳೂ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಸ್ರೇಲ್‌ನ ಹೈಫಾ ಹಾಗೂ ನಜರೆತ್ ಪ್ರದೇಶಗಳಲ್ಲಿ ಲೆಬನಾನ್‌ನಿಂದ ಹಾರಿ ಬಂದ ರಾಕೆಟ್‌ಗಳು ಅಪ್ಪಳಿಸಿವೆ ಅನ್ನೋ ಮಾಹಿತಿ ಸಿಕ್ಕಿದೆ. ಲೆಬನಾನ್‌ನಿಂದ ಸುಮಾರು 10ಕ್ಕೂ ಹೆಚ್ಚು ರಾಕೆಟ್‌ಗಳು ಇಸ್ರೇಲ್‌ಗೆ ಅಪ್ಪಳಿಸಿವೆ ಎಂದು ಸೇನೆಯ ಮಾಹಿತಿ ನೀಡಿದೆ. ಆದರೆ, ಬಹುಪಾಲು ರಾಕೆಟ್‌ಗಳನ್ನು ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆ ಐರನ್ ಡೋಮ್ ಆಗಸದಲ್ಲೇ ಛಿದ್ರಗೊಳಿಸುವಲ್ಲಿ ಯಶಸ್ವಿಯಾಗಿದೆ.
ತನ್ನ ದಾಳಿ ಕುರಿತು ಮಾಹಿತಿ ನೀಡಿರುವ ಲೆಬನಾನ್‌ನ ಹೆಜ್ಬೊಲ್ಲಾ ಉಗ್ರ ಸಂಘಟನೆ, ತನ್ನ ಬಳಿ ಇರುವ ಫಾದಿ 1 ಹಾಗೂ ಫಾದಿ 2 ಕ್ಷಿಪಣಿಗಳನ್ನು ಉಡಾವಣೆ ಮಾಡಿದ್ದಾಗಿ ಹೇಳಿಕೊಂಡಿದೆ